ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದ ಕಾಸರಗೋಡಿನ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತ್ಯು
ಕಾಸರಗೋಡು: ತಮಿಳುನಾಡು ಪ್ರವಾಸಕ್ಕೆ ತೆರಳಿದ್ದ ಕಾಸರಗೋಡಿನ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.
ತಮಿಳುನಾಡಿನ ಏರ್ವಾಡಿಗೆ ತೆರಳಿದ್ದ ಪೈವಳಿಕೆಯ ದೇವಕ್ಕಾನದ ಮುಹಮ್ಮದ್ ಹನೀಫ್ ಹಾಜಿ ಎಂಬವರ ಪುತ್ರ ಅನ್ಸಾಫ್ (18) ಮೃತಪಟ್ಟ ವಿದ್ಯಾರ್ಥಿ.
ಮೂರು ದಿನಗಳ ಹಿಂದೆ ಅನ್ಸಾಫ್ ಸೇರಿದಂತೆ ಸುಮಾರು 50 ವಿದ್ಯಾರ್ಥಿಗಳು ತಮಿಳುನಾಡಿನ ವಿವಿಧ ಸ್ಥಳಗಳಿಗೆ ಝಿಯಾರತ್ ಗಾಗಿ ತೆರಳಿದ್ದು, ವೇಳೆ ಅನ್ಸಾಫ್ ಏರ್ವಾಡಿ ಮುತ್ತುಪೇಟೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.




