ಸುಳ್ಯ: ಲಾರಿ, ಕಾರು, ಬೈಕ್ ನಡುವೆ ಸರಣಿ ಅಪಘಾತ: ಬೈಕ್ ಸವಾರರಿಗೆ,ಕಾರು ಚಾಲಕನಿಗೆ ಗಾಯ
ಸುಳ್ಯ: ಮಾಣಿ ಮೈಸೂರು ಹೆದ್ದಾರಿ ಸುಳ್ಯ ಸಮೀಪ ಪಾಲಡ್ಕ ಎಂಬಲ್ಲಿ ಲಾರಿ, ಕಾರು, ಬೈಕ್ ನಡುವೆ ಸರಣಿ ಅಪಘಾತವಾಗಿ ಬೈಕ್ ಸವಾರರಿಬ್ಬರು, ಹಾಗೂ ಕಾರು ಚಾಲಕ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಡಿ.15 ರಂದು ವರದಿಯಾಗಿದೆ.
ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರು ಮತ್ತು ಮಡಿಕೇರಿಯಿಂದ ಮಂಗಳೂರು ಕಡೆಗೆ ಗ್ಯಾಸ್ ಸಿಲಿಂಡರ್ ಹೇರಿಕೊಂಡು ಹೋಗುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿ ಈ ಸಂದರ್ಭದಲ್ಲಿ ಕಾರಿನ ಹಿಂಬಂದಿಯಿಂದ ಬರುತ್ತಿದ್ದ ಬೈಕ್ ಕಾರಿಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಪೆರಾಜೆ ಗ್ರಾಮದ ದೊಡ್ಡಡ್ಕ ದೀನರಾಜ್ ಹಾಗೂ ಕಂಜಿಪಿಲಿ ಪುರುಷೋತ್ತಮ ಎಂಬುವವರು ತೀವ್ರ ಗಾಯಗೊಂಡಿದ್ದು ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಕಾರು ಲಾರಿಗೆ ಡಿಕ್ಕಿಯಾದ ತೀವ್ರತೆಗೆ ಕಾರು ಚಾಲಕನ ಸೊಂಟಕ್ಕೆ ಪೆಟ್ಟಾಗಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರು ಚಾಲಕ ಬೈಕನ್ನು ಹಿಂದಿಕ್ಕುವ ಬರದಲ್ಲಿ ಮುನ್ನುಗುತ್ತಿದ್ದ ಸಂದರ್ಭ ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ಆಗಲು ಕಾರಣ ಎನ್ನಲಾಗಿದೆ.




