August 13, 2026

ಕಾಸರಗೋಡು: ಮಹಿಳೆಯ ಕತ್ತು ಹಿಸುಕಿ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ , ದಂಡ

0
IMG-20221214-WA0006.jpg

ಕಾಸರಗೋಡು: ಉದುಮ ಆಯಂಪಾರದ ಝುಬೈದಾ (60) ಎಂಬ ಮಹಿಳೆಯ ಕತ್ತು ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಥಮ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧವಾರ ತೀರ್ಫು ನೀಡಿದೆ.

ಕೊಲೆ , ಅಕ್ರಮವಾಗಿ ಮನೆಗೆ ಪ್ರವೇಶ , ದರೋಡೆ ಪ್ರಕರಣಗಳನ್ನು ಆರೋಪಿ ವಿರುದ್ಧ ಹೂಡಲಾಗಿದ್ದುಜೈಲು ಶಿಕ್ಷೆ ಜೊತೆಗೆ ಒಂದೂವರೆ ಲಕ್ಷ ರೂ . ದಂಡ ವಿಧಿಸಿದೆ.

ವಿದ್ಯಾನಗರ ಕುಂಜಾರು ಕೋಟೆಕಣಿಯ ಅಬ್ದುಲ್ ಖಾದರ್ (32) ಶಿಕ್ಷೆಗೊಳಗಾದವನು. ಮೂರನೇ ಆರೋಪಿ ಮಾನ್ಯದ ಅರ್ಷಾದ್ (28) ನನ್ನು ಖುಲಾಸೆಗೊಳಿಸಿದೆ. ಇನ್ನೋರ್ವ ಆರೋಪಿ ಸುಳ್ಯ ಅಜ್ಜಾವರದ ಅಬ್ದುಲ್ ಅಝೀಜ್ (36) ತಲೆ ಮರೆಸಿಕೊಂಡಿದ್ದಾನೆ .ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಅಝೀಜ್ ನನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಸ್ಟಡಿಗೆ ಪಡೆದಿದ್ದ 2018ರ ಸೆ. 14 ರಂದು ಸುಳ್ಯ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಬರುತ್ತಿದ್ದಾಗ ಸುಳ್ಯ ಕೆ ಎಸ್ ಆರ್ ಟಿಸಿ ಬಸ್ಸು ನಿಲ್ದಾಣ ಪರಿಸರದಿಂದ ತಪ್ಪಿಸಿ ಪರಾರಿಯಾಗಿದ್ದು ಈವರೆಗೆ ಪತ್ತೆಯಾಗಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!