March 20, 2026

ಬಾಲಕಿಯ ಮೇಲೆ ಅತ್ಯಾಚಾರ: ಕಾಫಿ ತೋಟದ ಮಾಲಕ‌ಸಹಿತ ನಾಲ್ವರ ಬಂಧನ

0
image_editor_output_image370176742-1671009144298.jpg

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿರುವ ಅಪ್ರಾಪ್ತ ಬಾಲಕಿ ಮೇಲೆ ಪೈಶಾಚಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ಕಾಫಿ ತೋಟದ ಮಾಲೀಕ ಸುದರ್ಶನ್, ಸ್ವಾಗತ್, ಪಾಪಣ್ಣ ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಕಿರಾತಕರಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಕಾಫಿ ತೋಟದಲ್ಲಿ ಪೋಷಕರೊಂದಿಗೆ ನೆಲೆಸಿದ್ದಳು

ಕೂಲಿ ಅರಸಿ ಬಂದು ತೋಟದ ಲೈನ್ ಮನೆಯಲ್ಲಿದ್ದ ಕಾರ್ಮಿಕನ ಮಗಳ ಮೇಲೆ ತೋಟದ ಮಾಲೀಕ ನೀಚ ಕೃತ್ಯ ಎಸಗಿದ್ದಾನೆ. ಅಪ್ರಾಪ್ತೆ ಮೇಲೆ ಕ್ರೌರ್ಯ ಮೆರೆದ ನಾಲ್ವರು ಪಾಪಿಗಳು ಅಂದರ್ ಆಗಿದ್ದಾರೆ.‌ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!