ಕಠ್ಮಂಡು: ಸರೋವರಕ್ಕೆ ಉರುಳಿ ಬಿದ್ದ ಕಾರು:
ಒಂದೇ ಕುಟುಂಬದ ನಾಲ್ವರು ಮೃತ್ಯು
ಕಠ್ಮಂಡು: ನೇಪಾಳದ ರೌತಹತ್ ಜಿಲ್ಲೆಯಲ್ಲಿ ಕಾರೊಂದು ಸರೋವರಕ್ಕೆ ಬಿದ್ದಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತರನ್ನು ಬಿಹಾರ ಮೂಲದ ದೀನನಾಥ ಸಾಹ್(25), ಅರುಣ್ ಸಾಹ್(30), ದಿಲೀಪ್ ಮಹತೊ(28) ಮತ್ತು ಅಮಿತ್ ಮಹತೊ(27) ಎಂದು ಗುರುತಿಸಲಾಗಿದೆ.
ಅವರೆಲ್ಲರೂ ನೇಪಾಳದ ದೇವಾನಿ ಗೊನಾಹಿ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ ಛತ್ ಪೂಜೆ ಕಾರ್ಯಕ್ರಮಕ್ಕೆಂದು ತೆರಳಿದ್ದರು.
ಪೂಜೆ ಮುಗಿಸಿ ಶನಿವಾರ ರಾತ್ರಿ ಮದ್ಯಪಾನ ಸೇವಿಸಿ ಕಾರಿನಲ್ಲಿ ಹೊರಟಿದ್ದಾರೆ. ಝುಂಖುನ್ವಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ, ಕಾರು ಸರೋವರದೊಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





