ಸಂವಿಧಾನವನ್ನು ರಕ್ಷಿಸಲು ಮೋದಿಯ ಜೀವ ತೆಗೆಯಬೇಕು: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ
ನವದೆಹೆಲಿ: ಕಾಂಗ್ರೆಸ್ ನ ಮಾಜಿ ಮಂತ್ರಿಯೊಬ್ಬರು ಪ್ರಧಾನಿ ಮೋದಿ ಅವರ ಬಗ್ಗೆ ವಿವಾದಾತ್ಮಕ ಹೇಳಿ ನೀಡಿರುವುದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಭಾನುವಾರ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ವೇಳೆ, ನರೇಂದ್ರ ಮೋದಿ ಅವರ ಕುರಿತು ಹೇಳಿದ ಮಾತು ಆಕ್ರೋಶ ಭುಗಿಲೇಳುವಂತೆ ಮಾಡಿದೆ.
ತನ್ನ ಬೆಂಬಲಿಗರ ಜೊತೆಗೆ ಮಾತನಾಡುತ್ತಾ “ಮೋದಿ ಅವರು ಚುನಾವಣೆಗಳನ್ನು ಕೊನೆಗೊಳಿಸುತ್ತಾರೆ, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ ಮತ್ತು ಅವರ ಆಡಳಿತದಲ್ಲಿ ದಲಿತರು ದೊಡ್ಡ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಸಂವಿಧಾನವನ್ನು ರಕ್ಷಿಸಲು ನೀವು ಮೋದಿ ಅವರ ಜೀವ ತೆಗೆಯಲು ಸಿದ್ದರಾಗಿ ಎಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ರಾಜಾ ಪಟೇರಿಯಾ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.




