September 29, 2026

ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಫೋಟ: ಬಾಲಕನಿಗೆ ಗಂಭೀರ ಗಾಯ

0
image_editor_output_image993910665-1670821157897.jpg

ಉತ್ತರಪ್ರದೇಶ: ಮೊಬೈಲ್ ಸ್ಪೋಟಗೊಂಡು ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮಥುರಾದಲ್ಲಿ ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡು ಅಮಾಯಕ ಬಾಲಕನೊಬ್ಬ ಸುಟ್ಟು ಕರಕಲಾಗಿದ್ದಾನೆ.

 

ಘಟನೆಯಲ್ಲಿ 13 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮೇವಾಟಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಬಾಲಕನ ತಂದೆ ಮೊಹಮ್ಮದ್ ಜಾವೇದ್, ಕೊಠಡಿಯಲ್ಲಿ ಕುಳಿತು ನನ್ನ ಮಗ ಮೊಬೈಲ್ ನಲ್ಲಿ ಆಟವಾಡುವಾಗ ಏಕಾಏಕಿ ದೊಡ್ಡ ಸ್ಫೋಟದ ಸದ್ದು ಕೇಳಿದೆ‌‌ ಹೋಗಿ ನೋಡಿದಾಗ ಮಗ ಗಂಭೀರವಾಗಿ ಬೆಡ್ ಮೇಲೆ ಬಿದ್ದು ಒದ್ದಾಡುತ್ತಿದ್ದ, ಮೊಬೈಲ್ ಸ್ಪೋಟಗೊಂಡು ದೂರ ಬಿದ್ದಿತ್ತು ಎಂದು ಹೇಳಿದ್ದಾರೆ. ತಕ್ಷಣ ಬಾಲಕನಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!