ಮಂಗಳೂರು: ಯುವ ವಕೀಲನಿಗೆ ಹಲ್ಲೆ ಪ್ರಕರಣ – ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ಐ ಅಮಾನತು
ಮಂಗಳೂರು: ಯುವ ವಕೀಲ ಕುಲದೀಪ್ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ಐ ಸುತೇಶ್ ಅವರನ್ನು ಅಮಾನತು ಮಾಡಿರುವುದಾಗಿ ಪಶ್ಚಿಮ ವಲಯದ ಡಿಐಜಿ ಆದೇಶ ಹೊರಡಿಸಿದ್ದಾರೆ.
ಪೂಂಜಾಲಕಟ್ಟೆ ಪೊಲೀಸರು ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿ ಜಾಗದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ವಕೀಲರು ಜಿಲ್ಲೆಯಾಧ್ಯಂತ ಪ್ರತಿಭಟನೆ ನಡೆಸಿ ಸುತೇಶ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದರು.
ಇನ್ನು ಎಸ್ಐ ಸುತೇಶ್ ಅವರನ್ನು ಎಸ್.ಪಿ ಅವರ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.




