November 13, 2024

ವಿಟ್ಲ: ಕಂಬಳಬೆಟ್ಟು ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧೆ : ಮಣಿಪುರ -ಕಟಪಾಡಿ ತಂಡಕ್ಕೆ ಪ್ರಶಸ್ತಿ

0

ವಿಟ್ಲ : ಇಲ್ಲಿಗೆ ಸಮೀಪದ ಕಂಬಳಬೆಟ್ಟು ಸೌಹಾರ್ದ ಫ್ರೆಂಡ್ಸ್ ಇದರ ವತಿಯಿಂದ 7 ನೇ ವರ್ಷದ ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ ಕಂಬಳಬೆಟ್ಟು ಜಂಕ್ಷನ್ ನಲ್ಲಿ ಶನಿವಾರ ನಡೆಯಿತು.

      ಕಂಬಳಬೆಟ್ಟು ಮಸೀದಿ ಮುದರ್ರಿಸ್ ಇಬ್ರಾಹಿಂ ಮದನಿ ಉದ್ಘಾಟಿಸಿದರು, ಸೌಹಾರ್ದ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಕೆ.ಎಸ್.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು.

     ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಗಫೂರ್ ನೂಜಿ, ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮ‌ಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ದರ್ಬಾರ್, ಕಂಬಳಬೆಟ್ಟು ಮಸೀದಿ ಕಾರ್ಯದರ್ಶಿ ಹಾಜಿ ಮೊಹಿದಿನ್ ಶಾಫಿ, ಶಾಂತಿನಗರ ಮದ್ರಸ ಶಿಕ್ಷಕರಾದ ಶರೀಫ್ ಮದನಿ ಪಾನೇಲ, ಬದ್ರುದ್ದೀನ್ ಮದನಿ ಕದಿಕೆ, ಕಂಬಳಬೆಟ್ಟು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ (ಅದ್ರು), ಶಾಂತಿನಗರ ನೂರುಲ್ ಇಸ್ಲಾಂ ಮದರಸ ಅಧ್ಯಕ್ಷ ಅಬ್ದುಲ್ ರಝಾಕ್, ಇಸ್ಮಾಯಿಲ್ ಬ್ರೈಟ್ ಕಬಕ, ಎನ್.ಕೆ.ಹಮೀದ್ ಕಂಬಳಬೆಟ್ಟು, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಸಿದ್ದೀಕ್, ಕಾರ್ಯಾಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಇಸುಬು ನೆಕ್ಕರೆ, ಎಂ.ಎಂ.ಶರೀಫ್, ಉಸ್ಮಾನ್ ಉರಿಮಜಲು, ಉದ್ಯಮಿ ಖಾದರ್ ಕಲ್ಲಂದಡ್ಕ ಖನ್ಝ್, ಅಬ್ದುಲ್ ರಝಾಕ್ ಮೋನು, ಶಾಂತಿನಗರ ಮದ್ರಸ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಕಂಬಳಬೆಟ್ಟು ಮಸೀದಿ ಕಾರ್ಯದರ್ಶಿ ಅಬ್ಬಾಸ್, ಎಂ.ಕೆ.ರಫೀಕ್ ಕಂಬಳಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

    ಇದೇ ವೇಳೆ ಸಂಸ್ಥೆಯ ಸ್ಥಾಪಕಾಧ್ಯಕ್ಷ ಕೆ.ಎಸ್.ಅಬ್ದುಲ್ ಹಮೀದ್, ದಫ್ ತೀರ್ಪುಗಾರ ಹಾರಿಸ್ ಮದನಿ ಪಾಟ್ರಕೋಡಿ, ಮುಂಬೈ ಉದ್ಯಮಿ ಹಸೈನಾರ್ ಕೊಳಂಬೆ ಅವರನ್ನು ಸನ್ಮಾನಿಸಲಾಯಿತು.

   16 ತಂಡಗಳು ಭಾಗವಹಿಸಿದ್ದ ಈ ದಫ್ ಸ್ಪರ್ಧೆಯಲ್ಲಿ ಮಣಿಪುರ – ಕಟಪಾಡಿಯ ಖಲಂದರ್ ಷಾ ದಫ್ ತಂಡ ಪ್ರಥಮ,   ಪಂಜಿಮೊಗರು – ಕೂಳೂರಿನ ತಾಜುಲ್ ಉಲಮಾ ದಫ್ ತಂಡ ದ್ವಿತೀಯ ಹಾಗೂ ಶಿರ್ವ – ಮಂಚಕಲ್ ನ ಅಲ್ ಅಮೀನ್ ದಫ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು.

    ಆರ್.ಕೆ.ಮದನಿ ಅಮ್ಮೆಂಬಳ, ಶಾಫಿ ಗಡಪಿಲ, ಭಾಸಿತ್ ಕನ್ನಂಗಾರ್ ತೀರ್ಪುಗಾರರಾಗಿ ಸಹಕರಿಸಿದರು.

ಮುಹಮ್ಮದ್ ಹಾರಿಸ್ ಮದನಿ ಶಾಂತಿನಗರ ಸ್ವಾಗತಿಸಿ, ವಂದಿಸಿದರು. ದಫ್ ಎಸೋಸಿಯೇಶನ್ ದ.ಕ.ಮತ್ತು ಉಡುಪಿ ಜಿಲ್ಲಾಧ್ಯಕ್ಷ  ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!