March 20, 2026

ಮಂಗಳೂರು: ಬೆಂಗ್ರೆ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳಿಗೆ ಕಾರು ಢಿಕ್ಕಿ: 7 ಬಾಲಕರಿಗೆ ಗಾಯ

0
IMG-20221211-WA0036.jpg

ಮಂಗಳೂರು: ನಗರದ ಹೊರವಲಯದ ಬೆಂಗರೆಯ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಕಾರೊಂದು ಢಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಬಡಿದ ಘಟನೆ ಇಂದು ನಡೆದಿದ್ದು, ಇದರಿಂದ 7 ಮಕ್ಕಳು ಗಾಯಗೊಂಡಿದ್ದಾರೆ.

ನಾಶಿಕ್, ಶಬೀಬ್, ಶಮ್ಮಾಝ್, ಮುಶೈಫ್, ಅರಾಫತ್, ಶಾಬಿಕ್, ನಹೀಂ ಗಾಯಗೊಂಡ ಮಕ್ಕಳು.

ಈ ಮಕ್ಕಳು ಸುಮಾರು 6ರಿಂದ 15 ವರ್ಷ ಪ್ರಾಯದೊಳಗಿನವರಾಗಿದ್ದಾರೆ. ಮಕ್ಕಳ ಕೈ, ಕಣ್ಣು ಕಾಲುಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಇಂದು ಸಂಡೇ ಆಗಿದ್ದ ಕಾರಣ ಎಂದಿನಂತೆ ಬೆಂಗರೆಯ ಸೂಪರ್ ಸ್ಟಾರ್ ಆಟದ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಚಾಲಕನೋರ್ವನ ನಿಯಂತ್ರಣ ತಪ್ಪಿದ ಕಾರು ಮಕ್ಕಳಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಇನ್ನು ಈ ಕಾರು ವಿದ್ಯುತ್ ಕಂಬಕ್ಕೂ ಬಡಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಮಕ್ಕಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರು ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಐವರು ಮಕ್ಕಳನ್ನು ಒಳರೋಗಿಗಳಾಗಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!