August 12, 2026

ಬಂಟ್ವಾಳ: ರಿಕ್ಷಾಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ: ಆರೋಪಿ ಪೊಲೀಸ್ ವಶಕ್ಕೆ

0
IMG_20221211_130905-750x375.jpg

ಬಂಟ್ವಾಳ: ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನನ್ನು ಮೆಲ್ಕಾರ್ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೊಹಮ್ಮದ್ ಶೇಕ್ ಫೈಝಿಲ್ ಎಂಬಾತ ಆರೋಪಿಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿ.5 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತಲಪಾಡಿ ಎಂಬಲ್ಲಿ ಬಿ.ಸಿ.ರೋಡಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಿಂಬದಿಯಿಂದ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ಪುರುಷೋತ್ತಮ ಹಾಗೂ ಪ್ರಯಾಣಿಕ ಹೃತಿಕ ಎಂಬವರಿಗೆ ಗಾಯವಾಗಿದ್ದು, ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ.

ರಿಕ್ಷಾ ಪಲ್ಟಿಯಾದ ಆರಂಭದಲ್ಲಿ ಘಟನೆಗೆ ಕಾರಣವೇನು ಎಂಬುದು ಅಸ್ಪಷ್ಟವಾಗಿತ್ತು. ಬಳಿಕ ಗಾಯಳುಗಳು ನೀಡಿದ ಮಾಹಿತಿಯಂತೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಬಗ್ಗೆ ಮಾಹಿತಿ ಲಭ್ಯವಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಟ್ರಾಫಿಕ್ ಪೊಲೀಸರು ಸ್ಥಳೀಯ ಸಿ.ಸಿ.ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದಾಗ ಕಾರಿನ ನಂಬರ್ ಲಭ್ಯವಾಯಿತು. ಕಾರು ಅಪಘಾತಗೊಳಿಸಿದ ಬಳಿಕ ತಪ್ಪಿಸುವ ಸಲುವಾಗಿ ಬೇರೆ ಬೇರೆ ರಸ್ತೆಗಳ ಮೂಲಕ ಸಂಚಾರ ಮಾಡಿದ ಬಗ್ಗೆ ಪೊಲೀಸರಿಗೆ ಸಾಕ್ಷಿ ಲಭ್ಯವಾಗಿತ್ತು.

ಸಿಸಿ ಕ್ಯಾಮರಾದ ಕಣ್ಗಾವಲಿನಿಂದ ತಪ್ಪಿಸುವ ಸಲುವಾಗಿ ಬಿ.ಸಿ.ರೋಡಿನ ಮೊಡಂಕಾಪು ಇತರ ಕಡೆಗಳಲ್ಲಿ ಸುತ್ತಾಡಿ ಬಳಿಕ ಶಾಂತಿ ಅಂಗಡಿ ಮನೆಗೆ ತೆರಳಿದ ಬಗ್ಗೆ ಮಾಹಿತಿ ಆದರಿಸಿ ಬಳಿಕ‌ ಸುಮಾರು ದಿನದ ಬಳಿಕ ಆರೋಪಿ ಹಾಗೂ ಕಾರನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾದ ರಾಜು ಹಾಗೂ ತನಿಖಾ ಸಹಾಯಕರಾದ ನಾಗೇಸ್ ಕೆ.ಸಿ. ಅವರು ಅರೋಪಿ ಹಾಗೂ ಕಾರನ್ನು ಪತ್ತೆಹಚ್ಚಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!