March 20, 2026

ಮನೆಗೆ ನುಗ್ಗಿ ವೈದ್ಯೆಯನ್ನು  ಅಪಹರಣ ಮಾಡಿದ ದುಷ್ಕರ್ಮಿಗಳು

0
image_editor_output_image-473581208-1670650505576.jpg

ಹೈದರಾಬಾದ್: ಸಿನಿಮೀಯ ರೀತಿಯಲ್ಲೇ ಕನಿಷ್ಠ 50 ಗೂಂಡಾಗಳು ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ವೈದ್ಯೆಯನ್ನು ಕಿಡ್ನ್ಯಾಪ್ ಮಾಡಿದ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಕಾಣೆಯಾದ ವೈದ್ಯೆಯನ್ನು ವೈಶಾಲಿ (24) ಎಂದು ಗುರುತಿಸಲಾಗಿದೆ. ವೈದ್ಯೆ ವೈಶಾಲಿ ಮನೆಗೆ ನುಗ್ಗಿದ್ದ ಗೂಂಡಾಗಳು ಮನೆಯನ್ನು ಧ್ವಂಸಗೊಳಿಸಿದ್ದಾರೆ. ಅದಾದ ಬಳಿಕ ಮನೆಯಲ್ಲಿದ್ದ ಆಕೆಯ ತಂದೆ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ.

ಅದಾದ ನಂತರ ಬಲವಂತವಾಗಿ ವೈಶಾಲಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ವೈಶಾಲಿಯ ಒಪ್ಪಿಗೆಯಿಲ್ಲದೇ ಅವಳನ್ನು ಎಳೆದುಕೊಂಡು ಕಾರಿನಲ್ಲಿ ಕೂರಿಸಿದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!