ಬೋರ್‌ವೆಲ್‍ಗೆ ಬಿದ್ದ 8 ವರ್ಷದ ಬಾಲಕ ಮೃತ್ಯು: 65 ಗಂಟೆಗಳ ರಕ್ಷಣಾ ಕಾರ್ಯಾಚರಣೆ ವ್ಯರ್ಥ
ಭೋಪಾಲ್: ಬೋರ್‌ವೆಲ್‍ಗೆ ಬಿದ್ದ 8 ವರ್ಷದ ಬಾಲಕ 65 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಹೊರತೆಗೆದರೂ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಬೇತುಲ್‍ನಲ್ಲಿ ನಡೆದಿದೆ.
ತನ್ಮಯ್ ಸಾಹು (8) ಮೃತ ಬಾಲಕ. ಡಿಸೆಂಬರ್ 6 ರಂದು ಜಮೀನಿನಲ್ಲಿ ಆಟವಾಡುತ್ತಿದ್ದ. ಈ ವೇಳೆ ಜಮೀನಿನಲ್ಲಿ ಇದ್ದ 55 ಅಡಿ ಆಳದ ಬೋರ್‌ವೆಲ್‍ಗೆ ತನ್ಮಯ್ ಬಿದ್ದಿದ್ದ.
ಇದನ್ನು ನೋಡಿದ ಪೋಷಕರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತನ್ಮಯ್ ಬಿದ್ದು ಒಂದು ಗಂಟೆಯಲ್ಲೇ ಸಿಬ್ಬಂದಿಯನ್ನು ಕರೆಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.




