March 20, 2026

ವಿಟ್ಲ: ಬಸ್ ಚಾಲಕ ನಡುವೆ ಹೊಡೆದಾಟ ಪ್ರಕರಣ – ಮೂವರು ಪೊಲೀಸ್ ವಶಕ್ಕೆ

0
IMG-20221209-WA0030.jpg

ವಿಟ್ಲ: ವಿಟ್ಲದ ಹಳೆ ಬಸ್ ನಿಲ್ದಾಣದಲ್ಲಿ ಟೈಮಿಂಗ್ಸ್ ವಿಚಾರದಲ್ಲಿ ಎರಡು ಖಾಸಗಿ ಬಸ್ ಗಳ ಚಾಲಕರು ಹೊಡೆದಾಡಿಕೊಂಡಿದ್ದು, ಮೂವರು ಚಾಲಕರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಚಿಂತನ್, ಹೊನ್ನಯ್ಯ, ಯತಿ ರಾಜ್ ಎಂದು ಗುರುತಿಸಲಾಗಿದೆ.

ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ವಿಟ್ಲ ಖಾಸಗಿ ಬಸ್ಸ್ ನಿಲ್ದಾಣದಲ್ಲಿದ್ದ ಮೂವರು ವ್ಯಕ್ತಿಗಳು ಸಾರ್ವಜನಿಕ ಸ್ಥಳವಾದ ಬಸ್ ತಂಗುದಾಣದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೈಯಿಂದ ದೂಡಾಡಿಕೊಂಡು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವಾಗುವ ರೀತಿಯಲ್ಲಿ ಕಲಹ ನಡೆಸುತ್ತಿದ್ದು, ಆ ಮೂವರನ್ನು ಹಿಡಿದು ಠಾಣೆಗೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!