ಉಡುಪಿ: ಮನೆಯ ಬೀಗ ಮುರಿದು ಕಳ್ಳತನ: ಚಿನ್ನಾಭರಣ ದೋಚಿ ಪರಾರಿ
ಉಡುಪಿ: ಮನೆಯೊಂದಕ್ಕೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಎಗರಿಸಿದ ಘಟನೆ ನಗರದ ಪುತ್ತೂರು ಬಳಿ ನಡೆದಿದೆ.
ಪುತ್ತೂರು ಗ್ರಾಮದ ಎಲ್‌ವಿಟಿ ದೇವಸ್ಥಾನದ ಬಳಿ ತನ್ನ ತಾಯಿಯೊಂದಿಗೆ ವಾಸವಿದ್ದ ಪೂಜಾ ಸಾಲ್ಯಾನ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು ಮನೆಯಲ್ಲಿ ಯಾರೂ ಇರದ ಸಮಯ ನೋಡಿಕೊಂಡು ಮನೆಯ ಎದುರಿನ ಬೀಗ ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ.
ಬೆಡ್ ರೂಮಿನ ಗಾಡ್ರೇಜ್‌ನಲ್ಲಿದ್ದ 16 ಗ್ರಾಂ ತೂಕದ 1 ಚಿನ್ನದ ಬಳೆ, 4 ಗ್ರಾಂ ತೂಕದ 1 ಚಿನ್ನದ ಪೆಂಡೆಂಟ್ ಸೇರಿ ಒಟ್ಟು 20 ಗ್ರಾಂ ತೂಕ ಹೊಂದಿದ ಸುಮಾರು 96,000 ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




