March 20, 2026

ವಿಟ್ಲ: ಬಸ್ ಟೈಮಿಂಗ್ಸ್ ವಿಚಾರದಲ್ಲಿ ಖಾಸಗಿ ಬಸ್‌ ಚಾಲಕರ ನಡುವೆ ಹೊಡೆದಾಟ: ಇಬ್ಬರು ಚಾಲಕರು ಪೊಲೀಸ್ ವಶಕ್ಕೆ

0
IMG-20221209-WA0011.jpg

ವಿಟ್ಲ: ವಿಟ್ಲದ ಹಳೆ ಬಸ್ ನಿಲ್ದಾಣದಲ್ಲಿ ಟೈಮಿಂಗ್ಸ್ ವಿಚಾರದಲ್ಲಿ ಎರಡು ಖಾಸಗಿ ಬಸ್ ಗಳ ಚಾಲಕರು ಸಾರ್ವಜನಿಕರು ಹೊಡೆದಾಡಿಕೊಂಡಿದ್ದು, ಇಬ್ಬರು ಚಾಲಕರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಎರಡು ಖಾಸಗಿ ಬಸ್ ಚಾಲಕರ ನಡುವೆ ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಟ ನಡೆದಿತ್ತು. ಇಂದು ಮಹೇಶ್ ಮತ್ತು ಮಣಿಕಂಠ ಬಸ್ ಚಾಲಕರು ರಂಪಾಟ ನಡೆಸಿದ್ದಾರೆ. ಮಹೇಶ್ ಬಸ್ ಚಾಲಕ ಮಣಿಕಂಠ ಬಸ್ ಚಾಲನ ಮೇಲೆ ಹಲ್ಲೆ ನಡೆಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಘಟನೆಯಿಂದ ಬಸ್ ನಿಲ್ದಾಣ ರಣರಂಗದಂತೆ ನಿರ್ಮಾಣಗೊಂಡಿದೆ. ತಕ್ಷಣವೇ ಸ್ಥಳಕ್ಕೆ ಬಂದ ವಿಟ್ಲ ಪೊಲೀಸರು ಇಬ್ಬರು ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ಖಾಸಗಿ ಬಸ್ ಚಾಲಕರ ರಂಪಾಟದಿಂದ ಜನರು ರೋಸಿ ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!