September 20, 2024

ಹನಿಟ್ರ್ಯಾಪ್ ಪ್ರಕರಣ: ಖ್ಯಾತ ಯ್ಯೂಟೂಬರ್ ಪೊಲೀಸ್ ಕಸ್ಟಡಿಗೆ: ಲಕ್ಷ ಕಳೆದುಕೊಂಡ ಉದ್ಯಮಿಯಿಂದ ದೂರು

0

ನವದೆಹಲಿ: ಖ್ಯಾತ ಯ್ಯೂಟೂಬರೋರ್ವಳ ಮೇಲೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಉದ್ಯಮಿಯೊಬ್ಬ ನೀಡಿದ ದೂರಿನಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ನವೆಂಬರ್ 24 ರಂದು ಗುರುಗ್ರಾಮ್‌ನ ಸೆಕ್ಟರ್ -50 ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದ ಉದ್ಯಮಿ, ನಮ್ರ ಖಾದಿರ್ ವಿರುದ್ಧ ದೂರು ದಾಖಲು ಮಾಡಿದ್ದ.

ಈ ಮಾಯಾಂಗನೆ ಪರಿಚಯವಾದಾಗಿನಿಂದ ಹಿಡಿದು, 80ಲಕ್ಷಕ್ಕೆ ಧಮ್ಕಿ ಹಾಕೋ ತನಕ ಏನೇನ್ ನಡೆಯಿತು ಎಲ್ಲವನ್ನೂ ವಿವರಿಸಿ ಹೇಳಿದ್ದ. ಅಲ್ಲದೇ ಅದೊಂದು ರೇಪ್​ ಕೇಸ್​ ವಿಚಾರವನ್ನ ಪ್ರಸ್ತಾಪ ಮಾಡಿದ್ದ.

ಸೋಶಿಯಲ್​ ಮೀಡಿಯಾ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದ ಈಕೆಯನ್ನು ಬಾದಶಹಪುರದ ಬಿಸಿನೆಸ್​ಮ್ಯಾನ್​ ಒಬ್ಬ ಜಾಹೀರಾತು ವಿಚಾರವಾಗಿ ಸಂಪರ್ಕ ಮಾಡಿದ್ದ. ಈ ಕೆಲಸಕ್ಕೆ ಅಡ್ವಾನ್ಸ್​ ಆಗಿ ನಮ್ರ ಖಾದಿರ್ 2 ಲಕ್ಷ ಅಡ್ವಾನ್ಸ್​ ಪಡೆದುಕೊಂಡಿದ್ದಾಳೆ.

ಮುಂದೆ ಸೋಹ್ನಾ ರಸ್ತೆಯ ಹೋಟೆಲ್‌ನಲ್ಲಿ ಇದೇ ವಿಚಾರವಾಗಿ ಮಾತುಕತೆ ನಡೆದಿದೆ. ಈ ಮಾತುಕತೆ ಕೇವಲ ಬಿಸಿನೆಸ್​ಗೆ ಸಂಬಂಧ ಪಟ್ಟದ್ದು ಮಾತ್ರ ಆಗಿರದೆ ಬಿಸಿನೆಸ್​​ ಗೆರೆಯನ್ನ ದಾಟಿ ಸಲುಗೆಯ ಸ್ನೇಹ ಬೆಳೆಯಲು ಕೂಡಾ ಕಾರಣವಾಗಿತ್ತು.

ಆದರೆ 2ಲಕ್ಷ ಅಡ್ವಾನ್ಸ್ ಪಡೆದುಕೊಂಡ ಈ ಸುಂದರಿ ತನಗೆ ಒಪ್ಪಿಸಿದ ಕೆಲಸ ಮಾಡಿಲ್ಲವೆಂದು ಕೊಟ್ಟ 2 ಲಕ್ಷ ಹಣವನ್ನ ವಾಪಸ್​ ಪಡೆದುಕೊಳ್ಳುವಂತೆ ಕೇಳಿದ್ದಾರೆ. ಇದೇ ಸಂದರ್ಭ ಆ ಮಾಟಗಾತಿಯ ಅಸಲಿ ಮುಖ ಈತನಿಗೆ ಪರಿಚಯವಾದದ್ದು.

ಇದಕ್ಕೆ ಸರಿಯಾದ ಯೋಜನೆಯನ್ನು ಹಾಕಿಕೊಂಡ ಈಕೆ ತನ್ನ ಗಂಡನ ಸಹಾಯದಿಂದ ಉದ್ಯಮಿಗೆ ನಶೆ ಏರುವಂತೆ ಮದ್ಯ ಕುಡಿಸಿ ಹೊಟೇಲ್‌ ರೂಂನಲ್ಲಿ ತನ್ನ ಜೊತೆ ಮಲಗಿಸಿಕೊಂಡು ನಂತರ ರೇಪ್‌ ಕಥೆ ಕಟ್ಟಿ ಬ್ಲ್ಯಾಕ್‌ಮೇಲ್ ಮಾಡಿ ನರಕ ದರ್ಶನ ಮಾಡಿಸಿದ್ದಾಳೆ.

ತಾನು ಸೆರೆಹಿಡಿದಿದ್ದ ವೀಡಿಯೋ ತೋರಿಸಿ ಈಕೆ ಹಣ, ಎಟಿಎಂ ಅಂತ ಎಲ್ಲದಕ್ಕೂ ಬೇಡಿಕೆಯಿಟ್ಟು ಆ ಯುವತಿ ಉದ್ಯಮಿಗೆ ಹನಿಟ್ರ್ಯಾಪ್ ಮಾಡಿಸಿದ್ದಾಳೆ. ಇದೀಗ ದೂರಿನಂತೆ ಪೊಲೀಸರ ಅತಿಥಿಯಾಗಿದ್ದಾಳೆ.

Leave a Reply

Your email address will not be published. Required fields are marked *

error: Content is protected !!