March 21, 2026

ತಡವಾಗಿ ತಂದಿದ್ದಕ್ಕೆ ಬಾಯಿಗೆ ಬಂದಂತೆ ಬೈದ ಮಹಿಳೆ: ಮನನೊಂದು ಡೆಲಿವರಿ ಬಾಯ್ ಆತ್ಮಹತ್ಯೆ

0
image_editor_output_image-106704205-1726777619476.jpg

ಚೆನ್ನೈ: ಮಹಿಳೆಯೊಬ್ಬರು ಬೈದರೆಂಬ ಕಾರಣಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ತಮಿಳುನಾಡಿನ ಕೊಳತ್ತೂರಿನಲ್ಲಿ ಈ ದುರಂ*ತ ಸಂಭವಿಸಿದೆ.

ಈತ ತಡವಾಗಿ ಡೆಲಿವರಿ ಮಾಡಿದ್ದಕ್ಕೆ ಮಹಿಳೆಯೊಬ್ಬಳು ಬಾಯಿಗೆ ಬಂದಂತೆ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

ಜೆ.ಪವಿತ್ರನ್ ಮೃತ ಯುವಕ. ಈತ ಬಿಕಾಂ ವಿದ್ಯಾರ್ಥಿಯಾಗಿದ್ದು, ಸಂಜೆಯ ಹೊತ್ತಿನಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ದಿನಸಿ ಸಾಮಾನುಗಳನ್ನು ತಲುಪಿಸಲು ಹೋದಾಗ ಮಹಿಳೆಯೊಬ್ಬರು ತನ್ನನ್ನು ನಿಂದಿಸಿದ್ದರಿಂದ ಮನನೊಂದ ತಾನು ಈ ಕ್ರಮ ಕೈಗೊಂಡಿರುವುದಾಗಿ ಯುವಕ ಡೆತ್ ನೋಟ್ನಲ್ಲಿ ಬರೆದಿದ್ದ ಎನ್ನಲಾಗಿದೆ. ಮನೆಯ ಅಡ್ರಸ್ ಸಿಗದೇ ಇದ್ದ ಕಾರಣ ದಿನಸಿ ತಲುಪಿಸುವಷ್ಟರಲ್ಲಿ ತಡವಾಯಿತು.

ಇದರಿಂದ ಕೋಪಗೊಂಡ ಮಹಿಳೆ ಡೆಲಿವರಿ ಕಂಪನಿಗೆ ದೂರು ನೀಡಿ, ಈ ಯುವಕನನ್ನು ಮತ್ತೆ ಡೆಲಿವರಿಗಾಗಿ ಕಳುಹಿಸಬೇಡಿ ಎಂದಿದ್ದರು ಎನ್ನಲಾಗಿದೆ.

ಎರಡು ದಿನಗಳ ನಂತರ, ಶುಕ್ರವಾರ(ಸೆ.13) ಕೆಲಸ ಕಳೆದುಕೊಂಡ ಯುವಕ ಮಹಿಳೆಯ ಮನೆಗೆ ಕಲ್ಲು ಎಸೆದು ಕಿಟಕಿಯ ಗಾಜನ್ನು ಒಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಮಹಿಳೆ ಕೊರಟ್ಟೂರು ಪೊಲೀಸರಿಗೆ ದೂರು ನೀಡಿದ್ದು, ಸಿಎಸ್‌ಆರ್‌ ಜಾರಿ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!