August 14, 2026

ವಿಟ್ಲ: ಅಕ್ರಮವಾಗಿ ದನದ ಫಾರ್ಮ್ ನಿರ್ಮಾಣ: ಹಿಂದೂ ಜಾಗರಣ ವೇದಿಕೆಯಿಂದ ಆಕ್ಷೇಪನಾ ಮನವಿ ಪತ್ರ ಸಲ್ಲಿಕೆ

0
IMG-20221202-WA0036.jpg

ವಿಟ್ಲ: ಪುಣಚ ಪಂಚಾಯತ್ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ದನದ ಫಾರ್ಮ್ ನಿರ್ಮಾಣ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಪುಣಚ ಪಂಚಾಯತ್ ಆಡಳಿತ ಸಮಿತಿ ಹಾಗೂ ಪಿಡಿಒ ರವರಿಗೆ ಆಕ್ಷೇಪನಾ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಅನ್ಯಮತೀಯ ವ್ಯಕ್ತಿಯೊಬ್ಬನ ದನದ ಫಾರ್ಮ್ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಪಂಚಾಯತ್ ಆಡಳಿತ ಸಮಿತಿ ತಮ್ಮ ಕಾನೂನು ಮೂಲಕ ತೆರವುಗೊಳಿಸಬೇಕು ಹಾಗೂ ಪರವಾನಗಿ ಇಲ್ಲದೆ ಕಟ್ಟಡ ಕಟ್ಟುತ್ತಿರುವ ಮಾಲಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಆ ಜಾಗದಲ್ಲಿ ದನದ ಫಾರ್ಮ್ ನಿರ್ಮಾಣ ಪೂರ್ತಿಗೊಂಡರೆ ಕೇವಲ 100 ಮೀಟರ್ ಒಳಗೆ ಕೇರಳ ಗಡಿ ಪ್ರದೇಶಕ್ಕೆ ತೆರಳುವ ಅಕ್ರಮ ಒಳ ರಸ್ತೆ ಇದ್ದು ಇದರ ಮೂಲಕ ಗೋ ಸಾಗಾಟ ವ್ಯಾಪಕವಾಗುವ ಸಾಧ್ಯತೆ ಹೆಚ್ಚಿದ್ದು, ಇದರ ವಿರುದ್ದ ತಕ್ಷಣ ಕ್ರಮಕೈಗೊಳ್ಳದೆ ಇದ್ದರೆ ಹೋರಾಟ ನಡೆಸಲಾಗುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!