August 14, 2026

ಆಮಂತ್ರಣವಿಲ್ಲದೇ ಮದುವೆಯಲ್ಲಿ ಊಟ ಮಾಡಿದ ಯುವಕನಿಗೆ ಬಲವಂತವಾಗಿ ಪಾತ್ರೆ ತೊಳೆಯುವ ಶಿಕ್ಷೆ!

0
IMG-20221202-WA0037.jpg

ಮಧ್ಯಪ್ರದೇಶ: ಆಮಂತ್ರಣವಿಲ್ಲದ ಮದುವೆಯಲ್ಲಿ ಊಟ ಮಾಡಿದ ಯುವಕನೊಬ್ಬನ್ನು ಪಾತ್ರೆ ತೊಳೆಯುವಂತೆ ಬಲವಂತ ಮಾಡಿದ ಅಮಾನವೀಯ ಘಟನೆ ಭೋಪಾಲ್’ನಲ್ಲಿ ನಡೆದಿದೆ.

ಭೋಪಾಲ್’ನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಜಬಲ್ಪುರ ಮೂಲದ ವಿದ್ಯಾರ್ಥಿಯಾಗಿರುವ ಈತ ತನ್ನ ಕಾಲೇಜು ಸಮೀಪದಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ಹೋಗಿ ಊಟ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು ಯುವಕನಿಗೆ ಪಾತ್ರೆ ತೊಳೆಯುವಂತೆ ಬಲವಂತ ಪಡಿಸಿದ್ದಾರೆ.

ಸದ್ಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕನನ್ನು ಮದುವೆ ಮನೆಯವರು ಗದರಿಸುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.

ವೀಡಿಯೋ ವೈರಲ್ ಆದ ಬೆನ್ನಲ್ಲೆ ಜನರು ಗಂಡು ಮತ್ತು ಹೆಣ್ಣಿನ ಕಡೆಯವರಿಗೆ ಛೀಮಾರಿ ಹಾಕಿದ್ದು, ಅಮಾನವೀಯ ಕೃತ್ಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!