August 14, 2026

ಪುತ್ತೂರು: ಬ್ರೇಕ್ ಹಾಕಿ ಬಸ್ ಚಾಲಕ, ಹಿಂದಿನಿಂದ ಬರುತ್ತಿದ್ದ ಟಿಟಿ ವಾಹನ ಢಿಕ್ಕಿ

0
image_editor_output_image2061896914-1669982124985.jpg

ಪುತ್ತೂರು: ಚಲಿಸುತ್ತಿದ್ದ ವೇಳೆಯೇ ಬಸ್ಸಿನ ಚಾಲಕ ಹಠಾತ್ತನೆ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಟಿಟಿ ವಾಹನ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಕುಂಬ್ರದಲ್ಲಿ ನಡೆದಿದೆ.

ಸುಳ್ಯದಿಂದ ಬರುತ್ತಿದ್ದ ಸರ್ಕಾರಿ ಬಸ್ಸು ಪ್ರಯಾಣಿಕನನ್ನು ಇಳಿಸಿವ ಉದ್ದೇಶದಿಂದ ಬಸ್ ತಂಗುದಾಣದಿಂದ ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿದ ಕಾರಣ ಹಿಂಬದಿಯಿಂದ ಮೈಸೂರಿನಿಂದ ಬರುತ್ತಿದ್ದ ಟಿ ಟಿ ವಾಹನ ಡಿಕ್ಕಿ ಹೊಡೆದಿದ್ದು ಟಿ ಟಿ ವಾಹನ ನಜ್ಜುಗುಜ್ಜಾಗಿದೆ.

ಸಂಪ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ. ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!