ಯುಪಿಯ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಲಕ್ಷ್ಮೀ ಸಿಂಗ್ ನೇಮಕ
ನೋಯ್ಡಾ: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಪೊಲೀಸ್ ಆಯುಕ್ತರಾಗಿ ಲಕ್ಷ್ಮೀ ಸಿಂಗ್ ಅವರನ್ನು ಸರ್ಕಾರ ನೇಮಕಗೊಳಿಸಿದ್ದು, ಆ ಮೂಲಕ ಉತ್ತರ ಪ್ರದೇಶದ ಮೊದಲ ಮಹಿಳಾ ಪೊಲೀಸ್ ಆಯಕ್ತರೆಂಬ ಗೌರವಕ್ಕೆ ಲಕ್ಷ್ಮೀ ಸಿಂಗ್ ಪಾತ್ರರಾಗಿದ್ದಾರೆ.
ಕಾನೂನು, ಸುವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ವಾರಣಾಸಿ ಮತ್ತು ಆಡಳಿತಾತ್ಮಕ ಪುನಾರಚನೆ ಹಿನ್ನೆಲೆಯಲ್ಲಿ ವಾರಣಾಸಿ, ಆಗ್ರಾ, ಗೌತಮ್ ಬುದ್ಧ ನಗರ, ಗಾಜಿಯಾಬಾದ್, ಅಯೋಧ್ಯೆ, ಮಥುರಾ, ಲಕ್ನೋ, ಬಹ್ರೈಚ್, ಪ್ರಯಾಗ್‌ರಾಜ್ ಸೇರಿದಂತೆ ವಿವಿಧ ಜಿಲ್ಲೆಗಳ 16 ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲಾಗಿದೆ.
ಇನ್ನು ಗೌತಮ ಬುದ್ದ ನಗರದ ಪೊಲೀಸ್ ಆಯುಕ್ತ ಅಲೋಕ್ ಸಿಂಗ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಐಪಿಎಸ್ ಲಕ್ಷ್ಮೀ ಸಿಂಗ್ ಅವರ ನೇಮಕವಾಗಿದೆ.
ಲಕ್ಷ್ಮೀ ಸಿಂಗ್ ಅವರು 2000ನೇ ಬ್ಯಾಚ್‌ನ ಐಪಿಎಸ್ ಆಗಿದ್ದು, ಉತ್ತಮ ಕಾರ್ಯಕ್ಷಮತೆ ಮತ್ತು ಪ್ರಾಮಾಣಿಕ ಕೆಲಸಕ್ಕಾಗಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಲಕ್ಷ್ಮೀ ಸಿಂಗ್, ಪ್ರಧಾನಿಯವರಿಂದ ಬೆಳ್ಳಿ ಲಾಠಿ, ಕೇಂದ್ರ ಗೃಹ ಸಚಿವಾಲಯದಿಂದ 9 ಎಂಎಂ ಪಿಸ್ತೂಲ್‌ನ್ನು ಪಡೆದಿದ್ದರು.





