June 26, 2026

ಮುಂಬೈ: ಎನ್ ಕೌಂಟರ್ ನಲ್ಲಿ 26 ನಕ್ಸಲರ ಹತ್ಯೆ

0
IMG-20211113-WA0026.jpg

ಮುಂಬೈ: ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 26 ಉಗ್ರರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತೀಸಗಡ ಗಡಿಗೆ ಸಮೀಪದಲ್ಲಿರುವ ಜಿಲ್ಲೆಯ ದನೋರಾ ಅರಣ್ಯ ವಲಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆ ಮತ್ತು ನಕ್ಸಲ್ ನಿಗ್ರಹ ದಳದ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

ಶುಕ್ರವಾರ ರಾತ್ರಿ ಆರಂಭವಾದ ಎನ್‌ಕೌಂಟರ್ ಈವರೆಗೂ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಮತ್ತು ರಕ್ಷಣಾ ಪಡೆಯಲ್ಲಿ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Leave a Reply

Your email address will not be published. Required fields are marked *

error: Content is protected !!