ಹಾಸನ:ಎಟಿಎಂ ಮಿಷನ್‍ಗಳಿಗೆ ಕಳೆದ ರಾತ್ರಿ ಯಾರೋ ಅಪರಿಚಿತರು ಪೂಜೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ಪಟ್ಟಣದಲ್ಲಿ ನಡೆದಿದೆ.
ನಗರದಲ್ಲಿ ಕಳೆದ ರಾತ್ರಿ ಮೂರು ಎಟಿಎಂಗಳಿಗೆ ಪೂಜೆ ಮಾಡಿರುವ ಅಪರಿಚಿತರು, ಅರಿಶಿನ ಕುಂಕುಮ ಹಚ್ಚಿ, ಅಕ್ಷತೆ ಇಟ್ಟು ಹೋಗಿದ್ದಾರೆ. ಇದು ಕಳ್ಳತನಕ್ಕೆ ಯತ್ನವೋ ಅಥವಾ ವಾಮಾಚಾರವೋ ಎಂಬುದರ ಬಗ್ಗೆ ಅನುಮಾನ ಮೂಡುತ್ತಿದೆ.