August 14, 2026

ಅಲ್ ಅಮೀನ್ ಯೂತ್ ಫೆಡರೇಶನ್(ರಿ) ಕೊಡಂಗಾಯಿಯ ನೂತನ ಆಡಳಿತ ಸಮಿತಿ ಆಯ್ಕೆ

0
IMG-20221128-WA0015.jpg

ಕೊಡಂಗಾಯಿ: ಧಾರ್ಮಿಕ, ಸಾಮಾಜಿಕ ಸೇವಾರಂಗದಲ್ಲಿ ಜನಪ್ರಿಯವಾಗಿರುವ ಪ್ರಸ್ತುತ ಅಲ್-ಅಮೀನ್ ಯೂತ್ ಫೆಡರೇಶನ್ ರಿ. AYF ಕೊಡಂಗಾಯಿ ಇದರ ವಾರ್ಷಿಕ ಮಹಾಸಭೆಯು ಕಳೆದ ನವೆಂಬರ್ ನಲ್ಲಿ ನಡೆದು 2022- 23ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮಹಾಸಭೆಯು ಇಬ್ರಾಹಿಂ ಝೈನಿ ರವರ ಸಭಾಧ್ಯಕ್ಷತೆಯಲ್ಲಿ ಸಂಘಟನೆಯ ಕಛೇರಿಯಲ್ಲಿ ನಡೆಯಿತು. ಕಳೆದ ಸಾಲಿನ ವರದಿಯನ್ನು ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದರು ಸದಸ್ಯರ ಅನುಮೋದನೆಯೊಂದಿಗೆ ವರದಿಯನ್ನು ಸಭಾದ್ಯಕ್ಷರು ಅಂಗೀಕರಿಸಿದರು.ಮುಂದಿನ ಒಂದು ವರ್ಷಕ್ಕೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಸಮದ್ ಸಿ ಹೆಚ್,ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಎಂ. ಕೋಶಾಧಿಕಾರಿಯಾಗಿ ಮಜೀದ್ ಟಿ ಯಂ. ಸಂಚಾಲಕರಾಗಿ ಲತೀಫ್ ಕೆ. ಉಪಾಧ್ಯಕ್ಷರಾಗಿ ಇಬ್ರಾಹಿಂ ಝೈನಿ.ಜತೆ ಕಾರ್ಯದರ್ಶಿ ಯಾಗಿ ರಫೀಕ್ ಪಿ. ಲೆಕ್ಕಪರಿಶೋಧಕರಾಗಿ ಇಯಾಬ್ ಯಂ ಕೆ, ಯಂ, ಕೆ ಮುಹಮ್ಮದ್ ಮತ್ತು ಕಾದರ್ ಟಿ ಯಂ, ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ರಾಹಿಂ ಅರಫ,ಶರೀಫ್ ಸಿ ಹೆಚ್,ಉಮ್ಮರ್ ಪಿ,ರಝಾಕ್ ಯಂ ಕೆ,ಹಸೈನಾರ್ ಟಿ ಯಂ, ಅಲೀಮುಲ್ಲಾ ಕೆ, ಹಾಗೂ ವಿದೇಶ ಪ್ರತಿನಿಧಿಗಳಾಗಿ ಆಬಿದ್ ಸಿ ಹೆಚ್, ತ್ವಾಹ ಡಿ, ಲತೀಫ್ ಅರಫ, ಅಶ್ರಫ್ ಎ ಬಿ. ಇವರನ್ನು ನೇಮಿಸಲಾಯಿತು.

ಪ್ರಸ್ತುತ ಸಂಘಟನೆಯು ಕಳೆದ 23 ವರ್ಷಗಳಿಂದ ನಾಡಿನಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಸಲ್ಲಿಸುತ್ತಾ ಬರುತ್ತಿದ್ದು ಜಾತ್ಯಾತೀತ ಭಾವದಿಂದ ಸರ್ವ ಜನರ ಆಶೋತ್ತರಗಳಿಗೆ ಕೈಲಾದ ಸ್ಪಂದನೆ ನೀಡುವ ಮೂಲಕ ಜನಾದರಣೆಗೆ ಪಾತ್ರವಾಗಿದೆ‌ ಇದೀಗ ಸಂಘಟನೆಯು ತನ್ನ ಬೆಳ್ಳಿಹಬ್ಬ ದ ಹೊಸ್ತಿಲಲ್ಲಿದೆ.

2023-24 ರಲ್ಲಿ 25 ವರ್ಷ ಪೂರೈಸುವ ಪ್ರಸ್ತುತ ಸಂಘಟನೆಯ ಬೆಳ್ಳಿಹಬ್ಬ ವನ್ನು ವೈಶಿಷ್ಟ್ಯವಾಗಿ ಆಚರಿಸಲು ತೀರ್ಮಾನಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!