August 14, 2026

ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಗೋ ಮಾಂಸ ಮತ್ತು ಆರೋಪಿ ವಶಕ್ಕೆ

0
image_editor_output_image1833498426-1669621835265

ಬಂಟ್ವಾಳ: ತಾಲೂಕಿನ ಪಾಂಡವರ ಕಲ್ಲು ಸಮೀಪದ ಕೂದೂರು ಎಂಬಲ್ಲಿ ಗೋವಧೆ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಗೋಮಾಂಸ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಪಾಂಡವರಕಲ್ಲು ನಿವಾಸಿ ಇಸ್ಮಾಯಿಲ್ ಎಂಬಾತನನ್ನು ಬಂಧಿಸಲಾಗಿದ್ದು, ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬೈಕ್ ಹಾಗೂ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಇಸ್ಮಾಯಿಲ್ ತನ್ನ ಮನೆ ಹಿಂಬದಿಯಲ್ಲಿರುವ ಅಕ್ರಮ ಕಟ್ಟಡದಲ್ಲಿ ಪರವಾನಿಗೆ ರಹಿತವಾಗಿ ದನಗಳ ಮಾಂಸ ಮಾಡಿ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!