August 14, 2026

ಗಂಟಲಿನಲ್ಲಿ ಸಿಕ್ಕಿಕೊಂಡ ಚಾಕ್ಲೇಟ್: 9 ವರ್ಷದ ಬಾಲಕ ಸಾವು

0
Screenshot_2022-11-28-10-46-08-77_680d03679600f7af0b4c700c6b270fe7.jpg

ಹೈದರಾಬಾದ್: ಚಾಕ್ಲೇಟ್ ತಿನ್ನುವಾಗ ಉಸಿರುಗಟ್ಟಿ 9 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ. ಬಾಲಕನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ ಬಾಲಕ ಚಾಕ್ಲೇಟ್ ತಿನ್ನುತ್ತಿದ್ದಾಗ ಅದು ಆತನ ಗಂಟಲಿನಲ್ಲಿ ಸಿಕ್ಕಿಕೊಂಡಿದೆ. ಬಳಿಕ ಆತನನ್ನು ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿ ವೈದ್ಯರು ಆತ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಬಾಲಕ ನಗರದ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, 2ನೇ ತರಗತಿಯಲ್ಲಿ ಓದುತ್ತಿದ್ದ. ಆತನ ತಂದೆ ಆಸ್ಟ್ರೇಲಿಯಾದಿಂದ ಚಾಕ್ಲೇಟ್ ಅನ್ನು ತಂದಿದ್ದು, ಅದನ್ನು ಬಾಲಕ ಶಾಲೆಗೆ ಒಯ್ದಿದ್ದ. ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಆತ ಚಾಕ್ಲೇಟ್ ಅನ್ನು ತಿನ್ನುತ್ತಿದ್ದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!