March 21, 2026

ವೃದ್ಧನ ಹೊಟ್ಟೆಯೊಳಗೆ ಬರೋಬ್ಬರಿ 187 ನಾಣ್ಯ ಪತ್ತೆ: ಹೊರತೆಗೆದ ವೈದ್ಯರು

0
IMG-20221128-WA0002.jpg

ಬಾಗಲಕೋಟೆ: ಜಿಲ್ಲೆಯ ಲಿಂಗಸುಗೂರು ತಾಲೂಕಿನ ವೃದ್ಧರೊಬ್ಬರ ಹೊಟ್ಟೆಯೊಳಗೆ ಬರೋಬ್ಬರಿ 187 ನಾಣ್ಯ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಅಸ್ವಸ್ಥಗೊಂಡಿದ್ದ ವೃದ್ಧನನ್ನು ಕುಟುಂಬದ ಸದಸ್ಯರು ಬಿವಿವಿ ಸಂಘದ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಕರೆ ತಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರಿಗೆ ನಾಣ್ಯಗಳು ನುಂಗಿರುವುದು ತಿಳಿದುಬಂದಿದೆ.

ನಂತರ ವೃದ್ಧನ ಹೊಟ್ಟೆಯಿಂದ 187 ನಾಣ್ಯಗಳನ್ನು ನಗರದ ಶ್ರೀ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಎಂಡೋಸ್ಕೋಪಿ ಮೂಲಕ ಹೊರ ತೆಗೆದಿದ್ದಾರೆ.

ಲಿಂಗಸುಗೂರು ತಾಲೂಕಿನ ದ್ಯಾಮಪ್ಪ ಹರಿಜನ (58) ಎಂಬವರು 5 ರೂ. ಮುಖಬೆಲೆಯ 56 ನಾಣ್ಯ, 2 ರೂ. ಮುಖಬೆಲೆಯ 51, 1 ರೂ. ಮುಖಬೆಲೆಯ 80 ನಾಣ್ಯಗಳು ಸಹಿತ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!