ರೈಲ್ವೇ ಹಳಿ ಮೇಲೆ ಆಟವಾಡುತ್ತಿದ್ದಾಗ ರೈಲು ಢಿಕ್ಕಿ: ಮೂವರು ಮಕ್ಕಳು ದಾರುಣ ಸಾವು
ಚಂಡೀಗಢ: ರೈಲ್ವೇ ಹಳಿ ಮೇಲೆ ಆಟವಾಡುತ್ತಿದ್ದಾಗ ವಲಸೆ ಕಾರ್ಮಿಕರ ಮೂವರು ಮಕ್ಕಳಿಗೆ ರೈಲು ಡಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ ಕಿರಾತ್‌ಪುರ ಸಾಹಿಬ್ ಬಳಿ ನಡೆದಿದೆ. ಘಟನೆಯ ಕುರಿತು ಪಂಜಾಬ್ ಸರ್ಕಾರ ತನಿಖೆಗೆ ಆದೇಶಿಸಿದೆ.
ನಗರದ ಸಟ್ಲೆಜ್ ನದಿಯ ಸೇತುವೆ ಸಮೀಪವಿರುವ ರೈಲ್ವೇ ಹಳಿ ಮೇಲೆ ವಲಸೆ ಕಾರ್ಮಿಕರ 4 ಮಕ್ಕಳು ಆಟವಾಡುತ್ತಿದ್ದಾಗ ದುರ್ಘಟನೆ ನಡೆದಿದೆ. ನಾಲ್ಕನೇ ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




