ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಮಹಿಳೆಯ ಶವ ಪತ್ತೆ: ಗಂಡನ ಮನೆಯವರ ವಿರುದ್ಧ ಕೊಲೆ ಆರೋಪ
ಬೆಂಗಳೂರು:ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಸದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪನ್ನಪಾಳ್ಯದಲ್ಲಿ ನಡೆದಿದೆ.
ಖತೀಜಾ ಕುಬ್ರ(30)ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿ.ಈಕೆಯನ್ನು ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.
ಖತೀಜಾ ಮೃತದೇಹ ಪತ್ತೆ ಸಂಬಂಧಿಸಿ ಪ್ರತಿಕ್ರಿಯಿಸಿದ ಆಕೆಯ ಪೋಷಕರು ಪತಿ ಮಹಬೂಬ್ ಸೇರಿ ಕುಟುಂಬದ ವಿರುದ್ಧ ಆರೋಪ ಮಾಡಿದ್ದಾರೆ.
ಮೆಹಬೂಬ್ ಮಗಳ ಜೊತೆ ಯಾವಾಗಲೂ ಜಗಳಾವಾಡುತ್ತಿದ್ದ.ಆತನಿಗೆ ಇನ್ನೋರ್ವ ಮಹಿಳೆಯ ಜೊತೆ ಅಕ್ರಮ ಸಂಬಂಧ ಇದೆ.ನನ್ನ ಮಗಳಿಗೆ ಪ್ರತಿನಿತ್ಯ ಹಲ್ಲೆ ಮಾಡುತ್ತಿದ್ದ,ಪತಿಯೆ ಕೊಲೆ ಮಾಡಿ ನೇಣು ಹಾಕಿದ್ದಾನೆಂದು ಕುಟುಂಬ ಆರೋಪಿಸಿದೆ.
ಇದೀಗ ಖತೀಜಾ ಅವರ ಪತಿ, ಮಾವ ಮತ್ತು ನಾದಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.