March 20, 2026

ಕಡಬ: ಯುವತಿಯೋರ್ವಳು ಅನ್ಯಕೋಮಿನ ಯುವಕನ ಜೊತೆ ಪತ್ತೆ: ಕಡಬ ಪೊಲೀಸರಿಂದ ವಿಚಾರಣೆ

0
IMG-20221127-WA0030.jpg

ಕಡಬ: ಹಿಂದೂ ಯುವತಿಯೋರ್ವಳು ಅನ್ಯಕೋಮಿನ ಯುವಕನ ಜೊತೆಗಿದ್ದ ಘಟನೆ ಕೊಂತೂರು, ಬೆಳದ ಗ್ರಾಮದ ಕೋಚಕಟ್ಟೆ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಮಂಜೇಶ್ವರ ಮೂಲದ ಹಿಂದೂ ಯುವತಿಯೋರ್ವಳು, ಮುಡಿಪು ಮೂಲದ ಅನ್ಯಕೋಮಿನ ಯುವಕನ ಸಂಪರ್ಕದಲ್ಲಿದ್ದು, ಪ್ರಸ್ತುತ ಆತ ಕೆಲಸದ ನಿಮಿತ್ತ ಬಂದವ ಕೊಂತೂರು, ಬೆಳದ ಗ್ರಾಮದ ಕೋಚಕಟ್ಟೆಯಲ್ಲಿ ರೂಮ್ ಮಾಡಿಕೊಂಡಿದ್ದು, ಹಿಂದೂ ಯುವತಿಯನ್ನು ಅಲ್ಲಿಗೆ ಬರಮಾಡಿಕೊಂಡಿದ್ದ ಎನ್ನಲಾಗಿದೆ.

ಹಿಂದೂ ಯುವತಿಯು ಅನ್ಯಕೋಮಿನ ಯುವಕನ ರೂಮ್ ನಲ್ಲಿರುವ ಬಗ್ಗೆ ತಿಳಿದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆ ಸ್ಥಳಕ್ಕೆ ಧಾವಿಸಿದ್ದು, ಅವರು ಬರುತ್ತಿರುವ ಬಗ್ಗೆ ತಿಳಿಯುತ್ತಿದ್ದಂತೆ ಯುವಕ ಹಿಂದೂ ಯುವತಿಯನ್ನು ಹಿಂಬಾಗಿಲಿನ ಮೂಲಕ ಹೊರಗೆ ಕಳುಹಿಸಿದ್ದು, ಆತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಯುವತಿಯ ಬಗ್ಗೆ ವಿಚಾರಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದು, ವಿಚಾರಣೆ ನಡೆಸಿ ಯುವತಿಯನ್ನು ಮನೆಗೆ ಬಿಡುವ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಇನ್ನು ಕೆಲವು ಸ್ಥಳೀಯರ ಮಾಹಿತಿ ಪ್ರಕಾರ ಅಲ್ಲಿ ಇಬ್ಬರು ಅನ್ಯಕೋಮಿನ ಯುವಕರು ಇದ್ದರೆನ್ನಲಾಗುತ್ತಿದ್ದು, ಯುವತಿಯನ್ನು ಕರೆ ತಂದ ಮುಡಿಪಿನ ಯುವಕನ ಹೆಸರು ಸವಾದ್ ಎಂದು ತಿಳಿಸಿದ್ದು ಇಬ್ಬರೂ ಯುವಕರು ಪರಾರಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ..

Leave a Reply

Your email address will not be published. Required fields are marked *

error: Content is protected !!