August 14, 2026

ಬಂಟ್ವಾಳ: ತಲೆನೋವಿಗೆ ಮಾತ್ರೆ ಸೇವಿಸಿದ ಬಾಲಕಿ: ಬಾಲಕಿ ಗಂಭೀರ ಆಸ್ಪತ್ರೆಗೆ ದಾಖಲು

0
IMG-20221127-WA0069

ಬಂಟ್ವಾಳ:  ಅತಿಯಾಗಿ ತಲೆ ನೋವಿನ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ಶಾಲಾ ಬಾಲಕಿಯೋರ್ವಳು ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ವರದಿಯಾಗಿದೆ.

ಕುಮ್ಡೆಲು ನಿವಾಸಿಯಾಗಿರುವ ಬಾಲಕಿ ಮಂಗಳೂರು ಖಾಸಗಿ ಕಾಲೇಜಿನ ಅಪ್ರಾಪ್ತ ಬಾಲಕಿಯಾಗಿದ್ದಾಳೆ. ಬಡತನದ ಕುಟುಂಬದ ಬಾಲಕಿಯಾಗಿರುವ ಈಕೆಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಾಲಕಿ ಅತಿಯಾದ ತಲೆನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ಸದ್ಯ ಸ್ಪಷ್ಟವಾದ ಯಾವುದೇ ಕಾರಣ ತಿಳಿದು ಬಂದಿಲ್ಲ. ಒಂದು ಕಡೆಯಿಂದ ತಾಯಿಯ ಅನಾರೋಗ್ಯ, ಇನ್ನೊಂದು ಕಡೆಯಿಂದ ಮೈಗ್ರೇನ್ ಸಮಸ್ಯೆ ಇವೆಲ್ಲವೂಗಳ ಜೊತೆ ಅತಿಯಾದ ಬಡತನದಿಂದ ಬೇಸತ್ತ ವಿದ್ಯಾರ್ಥಿನಿ ಮಾತ್ರೆ ತೆಗೆದಕೊಂಡಿದ್ದಾಳಾ? ಎನ್ನುವ ಪ್ರಶ್ನೆ ಪೋಲೀಸರದ್ದು.

ಸದ್ಯ ಬಾಲಕಿ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವಾಗಿ ಗುಣಮುಖವಾಗಿ ಬರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!