August 14, 2026

ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ: ಭಯದಿಂದ ಹೊರಗೆ ಓಡಿ ಬಂದ ಪ್ರಯಾಣಿಕರು

0
IMG-20221127-WA0023.jpg

ಕುಪ್ಪಂ: ಬೆಂಗಳೂರು-ಕುಪ್ಪಂ ಮೂಲಕ ಹಾದು ಹೋಗುವ ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಪ್ರಯಾಣಿಕರು ರೈಲಿನಿಂದ ಹೊರಗೋಡಿ ಬಂದಿದ್ದಾರೆ.

ಕುಪ್ಪಂ ಮೂಲಕ ಹೌರಾ ಎಕ್ಸ್‌ಪ್ರೆಸ್‌ ಸಂಚರಿಸುತ್ತಿದ್ದ ವೇಳೆ ಚಿತ್ತೂರು ಜಿಲ್ಲೆ ಕುಪ್ಪಂ ರೈಲ್ವೆ ನಿಲ್ದಾಣ ಬಳಿ ಘಟನೆ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಇನ್ನು ಘಟನೆ ವೇಳೆ ರೈಲು ಕುಪ್ಪ ನಿಲ್ದಾಣದಲ್ಲಿ ನಿಂತಿದ್ದು, ಇದರಿಂದಾಗಿ ಕೂಡಲೇ ಹೊರಗೋಡಿ ಬರಲು ಪ್ರಯಾಣಿಕರಿಗೆ ಅನುಕೂಲವಾಯಿತು. ಅಲ್ಲದೇ ಇದರಿಂದಾಗಿ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ.

ಮಾಹಿತಿ ತಿಳಿದ ತಕ್ಷಣ ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!