August 13, 2026

ಬಂಟ್ವಾಳ: ಕಾರು ಮತ್ತು ಪಿಕಪ್ ವಾಹನ ನಡುವೆ ಅಪಘಾತ: ನಿಯಂತ್ರಣ ಕಳೆದು ಮನೆಗೆ ನುಗ್ಗಿದ ಪಿಕಪ್ ವಾಹನ

0
image_editor_output_image-82279942-1669481016951

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ‌‌ವಿರುದ್ದ ದಿಕ್ಕಿನಲ್ಲಿ ಬಂದ ಕಾರೊಂದು ಪಿಕಪ್ ವಾಹನಕ್ಕೆ ಡಿಕ್ಕಿಯಾಗಿ ಬಳಿಕ ಪಿಕಪ್ ವಾಹನ ರಸ್ತೆಯ ಬದಿಯಲ್ಲಿರುವ ಮನೆಗೆ ನುಗ್ಗಿದ ಘಟನೆ ಮಣಿಹಳ್ಳ ಎಂಬಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ.

ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಘಟನೆ ನಡೆದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಪುಂಜಾಲಕಟ್ಟೆಯಿಂದ ಬರುತ್ತಿದ್ದ ಕಾರು ಬಂಟ್ವಾಳ ಕಡೆಯಿಂದ ಬರುತ್ತಿದ್ದ ಮೆಸ್ಕಾಂ ಇಲಾಖೆಗೆ ಸೇರಿದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ .

ಡಿಕ್ಕಿಯಿಂದ ತಪ್ಪಿ ಸಲು ಪ್ರಯತ್ನಿಸಿ ಪಿಕಪ್ ವಾಹನ ಚಾಲಕ ರಸ್ತೆ ಬದಿಯಲ್ಲಿ ದ್ದ ಮನೆಗೆ ನುಗ್ಗಿಸಿ ಮನೆಯ ಗೋಡೆ ಜರಿದು ಬಿದ್ದ ಘಟನೆ ಸಂಭವಿಸಿದೆ . ಮಣಿಹಳ್ಳ ನಿವಾಸಿ ಲಕ್ಷಣ್ ಎಂಬವರ ಮನೆ ಇದಾಗಿದೆ ಎಂದು ಹೇಳಲಾಗಿದೆ.

ಘಟನೆಯಿಂದ ಮನೆಯವರಿಗೆ ನಷ್ಟ ವಾಗಿದ್ದು, ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ಬೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!