August 14, 2026

ಮಂಗಳೂರಿನ ಬೆನ್ನಲ್ಲೇ ಕಾಶ್ಮೀರದಲ್ಲೂ ಕುಕ್ಕರ್‌ ಬಾಂಬ್‌ ಪತ್ತೆ – ತಪ್ಪಿದ ಭಾರಿ ದುರಂತ

0
IMG-20221126-WA0018.jpg

ಕಾಶ್ಮೀರ: ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಪ್ರಕರಣದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲೂ ಮಿನಿ ಬಸ್‌ ಒಂದರಲ್ಲಿ ಪ್ರೆಶರ್‌ ಕುಕ್ಕರ್‌ ಬಾಂಬ್‌ ಪತ್ತೆಯಾಗಿದೆ.

ಪ್ರೆಶರ್‌ ಕುಕ್ಕರ್‌ನಲ್ಲಿದ್ದ ಸ್ಫೋಟಕವನ್ನು ಇಮಾಮ್‌ಸಾಹಿಬ್‌ನಲ್ಲಿ ಶೋಪಿಯಾನ್‌ ಪೊಲೀಸರು ಹಾಗೂ 44 ರಾಷ್ಟ್ರೀಯ ರೈಫಲ್ಸ್‌ ಸಿಬ್ಬಂದಿಯು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದು, ಭಾರಿ ದುರಂತವೊಂದು ತಪ್ಪಿದಂತಾಗಿದೆ.

ಇನ್ನು ಐಇಡಿ ಪತ್ತೆಯಾದ ಸ್ಥಳದ ಸುತ್ತ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!