June 28, 2026

ಬೆಲ್ಜಿಯಂ ಯುವತಿಯ ಪ್ರಾಮಾಣಿಕತೆಗೆ ಸೋತ ಹಂಪಿಯ ಆಟೋ ಚಾಲಕ: ಇಂದು ಹಂಪಿಯ ದೇವಳದಲ್ಲಿ ವಿದೇಶಿ ಕನ್ಯೆಯನ್ನು ವರಿಸಿದ ಅನಂತರಾಜು

0
IMG-20221125-WA0044.jpg

ಹಂಪಿ : ದೇಶ ನೋಡಲು ಬಂದ ವಿದೇಶಿ ಚೆಲುವೆಯೊಬ್ಬಳು ಹಂಪಿಯ ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತಿದ್ದು, ನಾಲ್ಕು ವರ್ಷದ ಪ್ರೀತಿಗೆ ವಿವಾಹ ಬಂಧನದ ಮುದ್ರೆ ಒತ್ತಿದ್ದಾರೆ.

ಶುಕ್ರವಾರದಂದು ಹಂಪಿಯ ದೇವಳದಲ್ಲಿ ಸತಿಪತಿಯಾಗಿ ಸಪ್ತಪದಿ ತುಳಿದಿದ್ದಾರೆ.

ಈ ಮೂಲಕ ಹಂಪಿಯ ಅನಂತರಾಜು ವಿಶ್ವವಿಖ್ಯಾತ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ವಿದೇಶಿ ಕನ್ಯೆ ಕೆಮಿಲ್ ರನ್ನು ವರಿಸಿದ್ದಾರೆ.

ಅಂದ ಹಾಗೇ ಈ ದೇಶಿ-ವಿದೇಶಿ ಜೋಡಿಯ ಮದುವೆ 2 ವರ್ಷದ ಹಿಂದೆಯೇ ಆಗಬೇಕಿತ್ತಂತೆ.

ಆದರೆ ಕೊರೊನಾದಿಂದಾಗಿ ಪ್ರೇಮ ವಿವಾಹವನ್ನು ಮುಂದೂಡಬೇಕಾಯಿತು.

ಕೆಮಿಲ್‌ ತಂದೆ ಜೀಪ್‌ ಫಿಲಿಪ್ಪೆಯವರು ಮಗಳ ಮದುವೆಯನ್ನು ಬೆಲ್ಜಿಯಂನಲ್ಲಿ ಅದ್ಧೂರಿಯಾಗಿ ಮಾಡಬೇಕೆಂದು ಅಂದುಕೊಂಡಿದ್ದರಂತೆ. ಆದರೆ ಹಿಂದು ಸಂಪ್ರದಾಯದಂತೆ ಹಂಪಿಯಲ್ಲಿಯೇ ಮದುವೆಗೆ ನಿರ್ಧರಿಸಿ ಗುರುವಾರ ಸಂಜೆ ನಿಶ್ಚಿತಾರ್ಥ ನೆರವೇರಿಸಿಕೊಂಡು, ಶುಕ್ರವಾರ ಬೆಳಗ್ಗೆ ಅದ್ಧೂರಿ ಮದುವೆ ಮಾಡಿಸಿದ್ದಾರೆ.

ಹಂಪಿ ಜನತಾ ಪ್ಲಾನ್‌ನ ರೇಣುಕಮ್ಮ ದಿ. ಅಂಜಿನಪ್ಪ ಅವರ ಸುಪುತ್ರನಾಗಿರುವ ಅನಂತರಾಜು ಆಟೋ ಚಾಲಕನಾಗಿರುವ ಜತೆ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.

ನಾಲ್ಕೈದು ವರ್ಷಗಳ ಹಿಂದೆ ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬದವರು, ಅನಂತರಾಜು ಪ್ರಾಮಾಣಿಕತೆಗೆ ಮನ ಸೋತಿದ್ದರು.

ಈ ಮಧ್ಯೆ ಕೆಮಿಲ್‌, ಅನಂತರಾಜು ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅನಂತರಾಜು ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದಿದ್ದಾರೆ.

ದೇಶ-ವಿದೇಶಿಯ ಈ ಪ್ರೀತಿಗೆ ಗುರು ಹಿರಿಯರು ಸೇರಿ ಆಶೀರ್ವದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!