February 3, 2026

ಬಂಟ್ವಾಳ: ಸರಣಿ ಅಪಘಾತ: ಮಡಂತ್ಯಾರು ಕಾಲೇಜಿನ ವಿದ್ಯಾರ್ಥಿ ಮೃತ್ಯು

0
IMG-20221125-WA0011.jpg

ಬಂಟ್ವಾಳ: ಸರಣಿ ಅಪಘಾತದಲ್ಲಿ ಮಡಂತ್ಯಾರು ಕಾಲೇಜಿನ ವಿದ್ಯಾರ್ಥಿ ಮೃತಪಟ್ಟ ಘಟನೆ ಮಚ್ಚಿನ ಗ್ರಾಮದ ಮಾರಿಗುಡಿ ಎಂಬಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ರಕ್ಷಿತ್ ಎಂದು ಗುರುತಿಸಲಾಗಿದೆ.

ಮಡಂತ್ಯಾರಿನಿಂದ ಬಳ್ಳಮಂಜ ಕಡೆಗೆ ತೆರಳುತ್ತಿದ ಬೈಕ್ ಮುಂಭಾಗದಿಂದ ಬರುತ್ತಿದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಬಳಿಕ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಸರಣಿ ಅಪಘಾತದಲ್ಲಿ ರಕ್ಷಿತ್ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ವೀರ ಕೇಸರಿ ಬಳ್ಳಮಂಜ ಆಂಬ್ಯುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೇ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!