August 14, 2026

ಅನುಮತಿ ಇಲ್ಲದೇ ನಟ ಅಮಿತಾಬ್ ಬಚ್ಚನ್ ಹೆಸರು, ಧ್ವನಿ, ಫೋಟೋ ಬಳಸುವಂತಿಲ್ಲ:ದೆಹಲಿ ಹೈಕೋರ್ಟ್‌

0
IMG-20221125-WA0029.jpg

ನವದೆಹಲಿ: ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಹೆಸರು, ಪೋಟೊ ಅಥವಾ ಧ್ವನಿಯನ್ನು ಅವರ ಅನುಮತಿಯಿಲ್ಲದೆ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಇಂದು ತೀರ್ಪು ನೀಡಿದೆ.

ದೆಹಲಿ ಹೈಕೋರ್ಟ್‌ಗೆ ತಮ್ಮ ವ್ಯಕ್ತಿತ್ವ ಮತ್ತು ಪ್ರಚಾರದ ಹಕ್ಕುಗಳನ್ನು ಉಲ್ಲಂಘಿಸದಂತೆ ವ್ಯಕ್ತಿಗಳನ್ನು ನಿರ್ಬಂಧಿಸುವ ಮೂಲಕ ತಮ್ಮ ಇಮೇಜ್, ಧ್ವನಿ ಮತ್ತು ಹೆಸರನ್ನು ರಕ್ಷಿಸಲು ಕೋರಿ ಅಮಿತಾಬ್ ಬಚ್ಚನ್ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿರುವ ಕೋರ್ಟ್‌, ವ್ಯಕ್ತಿತ್ವ ಹಕ್ಕುಗಳು ಹೆಸರು ಮತ್ತು ಚಿತ್ರ ಸೇರಿದಂತೆ ತಮ್ಮ ಗುರುತಿನ ವಾಣಿಜ್ಯ ಬಳಕೆಯನ್ನು ನಿಯಂತ್ರಿಸುವ ವ್ಯಕ್ತಿಯ ಹಕ್ಕುಗಳಾಗಿದ್ದು, ಆದೇಶವನ್ನು ಜಾರಿಗೊಳಿಸದಿದ್ದರೆ ನಷ್ಟ ಮತ್ತು ಹಾನಿಯನ್ನು ಅನುಭವಿಸುವ ಸಾಧ್ಯತೆಯಿದೆ ಮತ್ತು ಕೆಲವು ಚಟುವಟಿಕೆಗಳು ಅವರಿಗೆ ಅಪಖ್ಯಾತಿ ತರಬಹುದು ಎಂದು ನ್ಯಾಯಾಲಯ ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!