ಕಾಡಾನೆ ದಾಳಿಗೆ ಮಹಿಳೆ ಬಲಿ: ಅರಣ್ಯ ಇಲಾಖೆಯ ಶಿಬಿರವನ್ನು ಧ್ವಂಸ ಮಾಡಿದ ಆಕ್ರೋಶಿತರ ತಂಡ
ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಮಹಿಳೆಯ ಮೇಲೆ ಆನೆ ದಾಳಿ ನಡೆದ ಬಳಿಕ ಜನರ ಆಕ್ರೋಶ ಮುಂದುವರಿದಿದ್ದು ಕುಂದೂರು ಗ್ರಾಮದಲ್ಲಿ ಶುಕ್ರವಾರ ಆಕ್ರೋಶಿತರ ಗುಂಪು ಅರಣ್ಯ ಇಲಾಖೆಗೆ ಸೇರಿದ ಕಳ್ಳ ಬೇಟೆ ನಿಗ್ರಹ ಶಿಬಿರವನ್ನು ಧ್ವಂಸ ಮಾಡಿದೆ.
ಕಚೇರಿಗೆ ನುಗ್ಗಿ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲವೆಂದು ಆಕ್ರೋಶ ಹೊರ ಹಾಕಲಾಗಿದೆ.