March 21, 2026

ದೆಹಲಿಯ ಹೋಲ್‌ಸೇಲ್ ಮಾರ್ಕೆಟ್‌‌ನಲ್ಲಿ ಅಗ್ನಿ ಅವಘಡ – 50 ಅಂಗಡಿಗಳು ಸುಟ್ಟು ಭಸ್ಮ

0
IMG-20221125-WA0014.jpg

ನವದೆಹಲಿ: ಉತ್ತರ ದೆಹಲಿಯ ಚಾಂದ್ನಿ ಚೌಕ್‌ನ ಭಾಗೀರಥ್ ಪ್ಯಾಲೇಸ್ ಪ್ರದೇಶದಲ್ಲಿರುವ ಹೋಲ್‌ಸೇಲ್ ಮಾರ್ಕೆಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ, ಸುಮಾರು 50 ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿದ್ದಾರೆ. 30ರಷ್ಟು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದು, ನಿನ್ನೆ ರಾತ್ರಿ ಈ ಅವಘಢ ಸಂಭವಿಸಿದ್ದು, ಇಂದು ಬೆಳಿಗ್ಗೆಯೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.

ಇನ್ನು ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಅಗ್ನಿಶಾಮಕ ದಳದ ಪ್ರಕಾರ, ಗುರುವಾರ ರಾತ್ರಿ 9.19 ಕ್ಕೆ ಬೆಂಕಿಯ ಬಗ್ಗೆ ಕರೆ ಬಂದಿದ್ದು, 40 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಇಲ್ಲಿಯವರೆಗೆ ಬೆಂಕಿ ಹತೋಟಿಗೆ ಬಂದಿಲ್ಲ. ಶುಕ್ರವಾರ ಬೆಳಿಗ್ಗೆಯೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *

You may have missed

error: Content is protected !!