February 3, 2026

ಬಂಟ್ಚಾಳ: ವಿವಿಧ ಸಂಘಟನೆಯಿಂದ ಏಸುವಿನ ವಿಗ್ರಹ ತೆರವುಗೊಳಿಸಲು ಮನವಿ: ಒಂದು ಧರ್ಮಕ್ಕೆ ವಿರೋಧವಾಗಿ ಕ್ರಮಕೈಗೊಳ್ಳದಂತೆ ಕ್ಯಾಥೋಲಿಕ್ ಸಭಾದಿಂದ ತಹಶಿಲ್ದಾರ್‌ಗೆ ಮನವಿ

0
IMG-20221124-WA0067

ಬಂಟ್ಚಾಳ: ಬಂಟ್ವಾಳ ತಾಲೂಕಿನ ಮಣಿಹಳ್ಳ, ಸರಪಾಡಿ, ಅಜಿಲಮೊಗರು, ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಧಾರ್ಮಿಕ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳಿಗೆ ಸಂಬಂಧಿಸಿದ ಹಲವಾರು ಕಟ್ಟೆಗಳು ಹಾಗೂ ಕಾಣಿಕೆ ಡಬ್ಬಿಗಳು ಇವೆ, ಆದರೆ ಕಳೆದ ಕೆಲವಾರು ದಿನಗಳಿಂದ ವಿವಿಧ ಸಂಘಟನೆಯವರು ಏಸುವಿನ ವಿಗ್ರಹ ತೆರವುಗೊಳಿಸಲು ಮನವಿ ಸಲ್ಲಿಸಿದ್ದು ಇದರ ವಿರುದ್ದ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಬಂಟ್ವಾಳ ತಹಶಿಲ್ದಾರ್ ಸ್ಮಿತಾರಾಮು ಅವರಿಗೆ ಮನವಿ ಸಲ್ಲಿಸಿದ್ದಾರೆ.

ವಿವಿಧ ಧಾರ್ಮಿಕ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳಿಗೆ ಸಂಬಂಧಿಸಿದ ಹಲವಾರು ಕಟ್ಟೆಗಳು ಹಾಗೂ ಕಾಣಿಕೆ ಡಬ್ಬಿಗಳು ಇವೆ, ಕಳೆದ ಕೆಲವಾರು ದಿನಗಳಿಂದ ವಿವಿಧ ಸಂಘಟನೆಯವರು ಏಸುವಿನ ವಿಗ್ರಹ ತೆರವುಗೊಳಿಸಲು ಮನವಿ ಸಲ್ಲಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಪ್ರಮುಖ ವಿವಾದಿತ ಸ್ಥಳದ ಮುಂಭಾಗದಲ್ಲಿರುವ ಸರಕಾರಿ ಸ್ಥಳದಲ್ಲಿ ಸಂಘಟನೆ ಗೆ ಸೇರಿದ ಕಟ್ಟೆಯಿದೆ. ಆದರೆ ಕೇವಲ ಒಂದು ಧರ್ಮಕ್ಕೆ ವಿರೋಧವಾಗಿ ಕ್ರಮಕೈಗೊಳ್ಳದೆ, ಎಲ್ಲರಿಗೂ ಸಮಾನ ನ್ಯಾಯ ಕೊಟ್ಟು ಶಾಂತಿ ವ್ಯವಸ್ಥೆ ಕಾಪಾಡಬೇಕೆಂದು ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಇದರ ಅಲ್ಲಿಪಾದೆ ಘಟಕದ ಅಧ್ಯಕ್ಷ ಸ್ಟ್ಯಾನಿ ಮಿನೇಜಸ್, ಕಾರ್ಯದರ್ಶಿ ಫಿಲೋಮಿನಾ ಫೆರ್ನಾಂಡಿಸ್, ಪ್ರಮುಖರಾದ ನವೀನ್ ಮೋರಾಸ್, ಲವೀನಾ ಮೋರಾಸ್, ಸದಸ್ಯರುಗಳಾದ ಪ್ರವೀಣ್ ಪಿಂಟೊ, ನೇವಿಲ್ ಪಿಂಟೊ, ಅವಿನಾಶ್ ಪಿಂಟೊ,ಮೇರಿ ಲಸ್ರಾದೊ ಅವರು ತಹಶಿಲ್ದಾರ್ ಸ್ಮಿತಾರಾಮು ಅವರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!