February 3, 2026

ನವೆಂಬರ್ 26 ಕ್ಕೆ ಸಿಂಸಾರುಲ್ ಹಖ್ ಹುದವಿ ಮಾಣಿ – ಕೊಡಾಜೆಗೆ

0
IMG-20221123-WA0007

ಬಂಟ್ವಾಳ : ಮಾಣಿ ಸಮೀಪದ ಕೊಡಾಜೆ ಬದ್ರಿಯ ಜುಮಾ ಮಸೀದಿ ಇದರ ವತಿಯಿಂದ ನ. 25 ಮತ್ತು 26 ರಂದು ಧಾರ್ಮಿಕ ಪ್ರವಚನ ಕಾರ್ಯಕ್ರಮವು  ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸ ವಠಾರದ ಮರ್ಹೂಂ ಮುಹಮ್ಮದ್ ಹಾಜಿ ನಗರದ ಮರ್ಹೂಂ ಸುಲ್ತಾನ್ ಹಾಜಿ ವೇದಿಕೆಯಲ್ಲಿ ನಡೆಯಲಿರುವುದು ಎಂದು ಬದ್ರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ನವಾಝ್ ಹೇಳಿದರು.

  ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,  ನವೆಂಬರ್ 25ರಂದು ಸಂಜೆ 07ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಉಡುಪಿ, ಚಿಕ್ಕಮಂಗಳೂರು ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಲಿದ್ದು ಕಾರ್ಯಕ್ರಮದ ಸ್ವಾಗತ ಸಮೀತಿ ಅಧ್ಯಕ್ಷ ಉಮರ್ ಹಾಜಿ ರಾಜ್ ಕಮಲ್ ಅಧ್ಯಕ್ಷತೆ ವಹಿಸುವರು, ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ  ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಪೈಝಿ ತೋಡಾರ್ ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಅಬೂ ಉಮೈರ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಮುಖ್ಯ ಪ್ರಭಾಷಣ ಗೈಯುವರು ಎಂದರು.

      ನ.26 ರಂದು ಅಂತರಾಷ್ಠೀಯ ಯುವವಾಗ್ಮಿ ಸಿಂಸಾರುಲ್ ಹಖ್ ಹುದವಿ ಅಬುದಾಭಿ ಮುಖ್ಯಭಾಷಣ ಗೈಯಲಿದ್ದು ಬದ್ರಿಯಾ ಜುಮಾ ಮಸೀದಿ ಗೌರಾವಾಧ್ಯಕ್ಷ ಸಯ್ಯಿದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ದುಃಹಾ ನೆರವೇರಿಸುವವರು. ಮಸೀದಿ ಅದ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಲ್ ಅದ್ಯಕ್ಷತೆ ವಹಿಸುವರು ಸ್ಥಳೀಯ ಮಸೀದಿ ಮಾಜಿ ಖತೀಬರಾದ ಹಾಜಿ ಪಿ.ಕೆ ಆದಂ ದಾರಿಮಿ ಸಹಿತ ಹಲವಾರು ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.

   ಕೊಡಾಜೆ ಬದ್ರಿಯ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ, ಅಧ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಲ್, ಕೋಶಾಧೀಕಾರಿ ಹಾಜಿ ಬಿ ಮುಹಮ್ಮದ್ ರಪೀಕ್ ಸುಲ್ತಾನ್,   .
ಸ್ವಾಗತ ಸಮೀತಿ ಅಧ್ಯಕ್ಷ ಉಮರ್ ಹಾಜಿ ರಾಜ್ ಕಮಲ್, ಕನ್ವೀನರ್ ಹನೀಫ್ ಖಾನ್ ಕೊಡಾಜೆ, ಸದಸ್ಯರಾದ ರಹೀಂ ಸುಲ್ತಾನ್, ಹಾಗೂ ಇಂಜಿನಿಯರ್ ನವಾಝ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!