ಆತ್ಮಹತ್ಯೆ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ
ಹೊಸದಿಲ್ಲಿ: ಕಳೆದ ವರ್ಷ ದೇಶದಲ್ಲಿ ವರದಿಯಾದ ಆತ್ಮಹತ್ಯೆ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 12,259 ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದ್ದು, ದೇಶದ ಒಟ್ಟಾರೆ ಪ್ರಕರಣಗಳಲ್ಲಿ ಶೇ. 8ರಷ್ಟು ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು (19,909) ಸಂಭವಿಸಿದ್ದರೆ, ತಮಿಳುನಾಡು (16,883), ಮಧ್ಯಪ್ರದೇಶ (14,578) ಮತ್ತು ಪಶ್ಚಿಮ ಬಂಗಾಳ (13,103) ನಂತರದ ಸ್ಥಾನದಲ್ಲಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ (ಎನ್‌ಸಿಆರ್‌ಬಿ) 2020ನೇ ಸಾಲಿನ ವರದಿ ತಿಳಿಸಿದೆ.
ಕರ್ನಾಟಕದಲ್ಲಿ 9,191 ಪುರುಷರು ಮತ್ತು 3,067 ಮಹಿಳೆಯರು ಹಾಗೂ ಒಬ್ಬರು ತೃತೀಯ ಲಿಂಗಿ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅನಾರೋಗ್ಯದಿಂದ 3,133 ಮಂದಿ, ಕೌಟುಂಬಿಕ ಸಮಸ್ಯೆಗಳಿಂದ 3,445 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.





