ಕಾಸರಗೋಡು: ಬಸ್ಸಿನಲ್ಲಿ 18 ಲಕ್ಷ ರೂ. ಹವಾಲ ಹಣ ಸಾಗಾಟ – ಓರ್ವ ವಶಕ್ಕೆ
ಕಾಸರಗೋಡು: ಮಂಜೇಶ್ವರ ಅಬಕಾರಿ ಸಿಬಂದಿಗಳು ಬಸ್ಸು ಪ್ರಯಾಣಿಕನಿಂದ ಸುಮಾರು 18 ಲಕ್ಷ ರೂ. ಹವಾಲ ಹಣವನ್ನು ವಶಸಿಡಿಸಿಕೊಂಡಿರುವ ಘಟನೆ ನಡೆದಿದೆ.
ಮಹಾರಾಷ್ಟ್ರ ಸೊಲ್ಲಾಪುರದ ನಿತಿನ್ (35) ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್ಆರ್‌ಟಿಸಿ ಬಸ್ಸನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.
ಕಾಸರಗೋಡು ನಿವಾಸಿಗೆ ತಲಪಿಸಲು ಮಹಾರಾಷ್ಟ್ರ ನಿವಾಸಿಯೋರ್ವರು ಹಣ ನೀಡಿದ್ದಾಗಿ ಬಂಧಿತ ನಿತಿನ್ ವಿಚಾರಣೆ ವೇಳೆ ತಿಳಿಸಿದ್ದಾನೆ.





