May 17, 2026

ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಲಕ್ಷಾಂತರ ರೂ. ದರೋಡೆ: ಅಜ್ಜಂಪುರ ಎಸ್ಸೈ ಸಹಿತ ಪೊಲೀಸ್ ಸಿಬ್ಬಂದಿಯ ವಿರುದ್ಧ ಎಫ್ಐಆರ್ ದಾಖಲು

0
image_editor_output_image2103994994-1669091826545.jpg

ಚಿಕ್ಕಮಗಳೂರು: ಕಳ್ಳತನ ಆಗಿದೆ ಅಂತ ಪೊಲೀಸ್ ಸ್ಟೇಷನ್‍ಗೆ ಬರುವ ನೊಂದವರಿಗೆ ಧೈರ್ಯ ತುಂಬಬೇಕಾದ ಪೊಲೀಸರೇ ಒಬ್ಬ ವ್ಯಕ್ತಿಯನ್ನ ಹೆದರಿಸಿ, ಬೆದರಿಸಿ ಲಕ್ಷಾನುಗಟ್ಟಲೇ ದೋಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ಇನ್ಸ್ ಪೆಕ್ಟರ್ ಲಿಂಗರಾಜ್ ದರೋಡೆಯ ಮೈನ್ ಲೀಡರ್ ಆಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಆನ್ ಡ್ಯೂಟಿಯಲ್ಲಿದ್ದಾಗ ಬಂಗಾರದ ವ್ಯಾಪಾರಿ ಯನ್ನ ದರೋಡೆ ಮಾಡಿದ ಆರೋಪ ಇವರ ಮೇಲಿದೆ. ಕಳೆದ ಮೇ 11ರಂದು ದಾವಣಗೆರೆ ಮೂಲದ ಭಗವಾನ್ ಸಾಂಕ್ಲಾ, ಅಂಗಡಿಗಳಿಗೆ ಬಂಗಾರ ಕೊಡಲು 2 ಕೆ.ಜಿ. 450 ಗ್ರಾಂ ಬಂಗಾರದ ತರುತ್ತಿದ್ದರು.

ಲಕ್ಷ ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದಾರೆ. ಆಗ ಮಾತುಕತೆ ಮಾಡಿ ಐದು ಲಕ್ಷಕ್ಕೆ ಸೆಟ್ಲ್ ಮೆಂಟ್ ಮಾಡಿ ಹಣ ಪಡೆದು ವಾಪಸ್ ಹೋಗಿದ್ದಾರೆ ಎಂದು ಭಗವಾನ್ ದೂರಿನಲ್ಲಿ ದಾಖಲಿಸಿದ್ದಾರೆ.

ಚಿಕ್ಕಮಗಳೂರು ಎಸ್‌ಪಿ ಸುದೀರ್ಘ ವಿಚಾರಣೆ ಬಳಿಕ ಇದೀಗ ಲಿಂಗರಾಜು, ಧನಪಾಲ್ ನಾಯ್ಕ್, ಓಂಕಾರಮೂರ್ತಿ, ಶರತ್ ರಾಜ್ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ಶುರುವಾಗಿದೆ.

Leave a Reply

Your email address will not be published. Required fields are marked *

error: Content is protected !!