May 17, 2026

ಮೈಸೂರಿನಲ್ಲಿ ರಸ್ತೆ ಅಪಘಾತ: ವಿಟ್ಲ ಪಟ್ಟಣ ಪಂಚಾಯತ್ ನ ಪೌರ ಕಾರ್ಮಿಕ ಸಾವು

0
image_editor_output_image-1762955632-1669093155021.jpg

ವಿಟ್ಲ ಪಟ್ಟಣ ಪಂಚಾಯತ್ ನ ಪೌರ ಕಾರ್ಮಿಕ ಪ್ರಸ್ತುತ ವಿಟ್ಲದ ರಥದಗದ್ದೆ ಬಳಿ ವಾಸ್ತವ್ಯವಿರುವ ದೊಡ್ಡ ಕುಮಾರ (47) ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ನಿನ್ನೆ ಅವರ ಹುಟ್ಟೂರು ಮೈಸೂರಿನಲ್ಲಿ ನಡೆದ ದ್ವಿಚಕ್ರ ವಾಹನ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 10 ವರ್ಷಗಳಿಂದ ವಿಟ್ಲ ಪಂಚಾಯತ್ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, 3 ವರ್ಷಗಳ ಹಿಂದೆ ಖಾಯಂ ಪೌರ ಕಾರ್ಮಿಕರಾಗಿ ಭಡ್ತಿ ಹೊಂದಿದ್ದರು. 2 ವರ್ಷಗಳ ಹಿಂದೆ ಕಟ್ಟಡದಿಂದ ಬಿದ್ದು ಗಾಯಗೊಂಡು ಚೇತರಿಸಿದ್ದರು.3 ವರ್ಷಗಳ ಹಿಂದೆ ಖಾಯಂ ಪೌರ ಕಾರ್ಮಿಕರಾಗಿ ಭಡ್ತಿ ಹೊಂದಿದ್ದರು.

Leave a Reply

Your email address will not be published. Required fields are marked *

error: Content is protected !!