May 17, 2026

ಮಂಗಳೂರು: ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದೇನು?

0
Kalladka_Prabhakar_Bhat.jpg

ಮಂಗಳೂರು: ರಾಜ್ಯದಲ್ಲಿ ದ.ಕ.ಜಿಲ್ಲೆ ಭಯೋತ್ಪಾದಕ ಸಂಘಟನೆಯ ಕೇಂದ್ರವಾಗಿ ಬೆಳೆಯುತ್ತಿರುವುದು ದುರ್ದೈವ ಸಂಗತಿಯಾಗಿದೆ ಎಂದು ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕ ಕೃತ್ಯಗಳಿಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಕುಮ್ಮಕ್ಕು ನೀಡುವ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದ ಇತ್ತೀಚಿನ ಬಂಟ್ವಾಳ ತಾಲೂಕಿನ ಎರಡು ಕಡೆಗಳಲ್ಲಿ ಗೋಡೆ ಬರಹದ ಮೂಲಕ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ.

ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು, ಶಿವಮೊಗ್ಗ ದ ಹರ್ಷ ಕೊಲೆ ಕೃತ್ಯಗಳು ಭಯೋತ್ಪಾದಕ ಚಟುವಟಿಕೆ ಗಳಿಗೆ ಪುಷ್ಟಿ ಕರಿಸಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ವಿಚಾರದ ಬಗ್ಗೆ ವಿರೋಧ ಮಾತನಾಡುವ ವ್ಯಕ್ತಿಗಳು ಶೃದ್ದಾ ಹತ್ಯೆ ಹಾಗೂ ಮಂಗಳೂರು ಪ್ರಕರಣ ದ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಅವರು ಪ್ರಶ್ನಿಸಿದರು. ಮಂಗಳೂರಿನಲ್ಲಿ ನಡೆದಿರುವ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣವನ್ಬು ಸರಕಾರ ಗಂಭೀರವಾಗಿ ಸಮಗ್ರ ತನಿಖೆ ನಡೆಸಿ ಭಯೋತ್ಪಾದಕ ಮೂಲವನ್ನು ಭೇದಿಸಬೇಕು ಎಂದು ಅವರು ಒತ್ತಾಯ ಮಾಡಿದರು.

Leave a Reply

Your email address will not be published. Required fields are marked *

error: Content is protected !!