May 17, 2026

ವಿಟ್ಲ: ಮನೆಯಲ್ಲಿ ಕಾಡೆಮ್ಮೆಯ ಮರಿ ಪತ್ತೆ: ಸ್ಥಳಕ್ಕೆ ಧಾವಿಸಿ ಕಾಡೆಮ್ಮೆಯನ್ನು ಕೊಂಡೊಯ್ದಿ ಅರಣ್ಯ ಸಿಬ್ಬಂದಿ

0
IMG-20221121-WA0060.jpg

ವಿಟ್ಲ: ವ್ಯಕ್ತಿಯೋರ್ವರ ಮನೆಯಲ್ಲಿ ಕಾಡೆಮ್ಮೆಯ (ಕಾಟಿ) ಮರಿಯೊಂದು ಪತ್ತೆಯಾದ ಘಟನೆ ಇಂದು ಮುಂಜಾನೆ ವಿಟ್ಲ ಕಸಬಾ ಗ್ರಾಮದ ನೆಕ್ಕಿಲಾರು ಎಂಬಲ್ಲಿ ನಡೆದಿದೆ.

ವಿಟ್ಲ ಕಸಬಾ ಗ್ರಾಮದ ನೆಕ್ಕಿಲಾರು ನಿವಾಸಿ ಲೋಕಯ್ಯ ಎಂಬವರ ಮನೆಯಲ್ಲಿ ಕಾಡೆಮ್ಮೆಯ (ಕಾಟಿ) ಮರಿ ಪತ್ತೆಯಾಗಿದೆ.

ಈ ವೇಳೆ ಸ್ಥಳದಲ್ಲಿ ಹಲವಾರು ಮಂದಿ ನೆರೆದಿದ್ದು ಕಾಡೆಮ್ಮೆಯ ಮರಿಯ ತಾಯಿ ಬರಬಹುದು ಎಂದು ಕಾದು ಕುಳಿತಿದ್ದರು. ಬಳಿಕ ಮನೆಯವರು ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೆಲಿಂಜ ಮತ್ತು ಉಕ್ಕುಡದ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾಡೆಮ್ಮೆಯ ಮರಿಯನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!