February 4, 2026

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆ ಸಾವು

0
death.jpg

ಕಡಬ:ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಡಬ ಬಳಿ ನಡೆದಿದೆ.

ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೇಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದ್ದು ಬೆಂಗಳೂರಿನ ದಾಸರಹಳ್ಳಿಯ ನಾಗರತ್ನಮ್ಮ( 58ವ) ಮೃತಪಟ್ಟವರು. ಬೆಂಗಳೂರಿನಿಂದ ತಮ್ಮ ಕುಟುಂಬಸ್ಥರೊಂದಿಗೆ ರೈಲು ಮೂಲಕ ಬಂದವರು ನೆಟ್ಟಣದಲ್ಲಿ ಇಳಿದಿದ್ದರು. ಬಳಿಕ ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಧರ್ಮಸ್ಥಳಕ್ಕೆ ತೆರಳಲು ಬಸ್ ಏರಿದ್ದರು.

ಬಸ್ ಮುಂಭಾಗ ಕುಳಿತ್ತಿದ್ದ ಮಹಿಳೆ ಬಸ್‌ ಕೇಪು ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಬ್ಯಾಗ್ ತೆಗೆದುಕೊಳ್ಳಲೆಂದು ನಾಗರತ್ನಮ್ಮ ಅವರು ಹಿಂಬದಿಗೆ ಹೋಗಿದ್ದರು. ತಿರುವು ರಸ್ತೆಯಲ್ಲಿ ಬಸ್‌ ಚಲಿಸಿದ ವೇಳೆ ಬಸ್‌ನ ಹಿಂಬದಿ ಬಾಗಿಲು ಹಾಕದೇ ಇದ್ದುದರಿಂದ ಏಕಾಏಕಿ ಮಹಿಳೆ ಬಸ್‌ನಿಂದ ಹೊರಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.ಕಡಬ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!