ಇಂದಿನಿಂದ ವಿವಿಧೆಡೆ ಮಾರುಕಟ್ಟೆಗಳಲ್ಲಿ ಕೆನೆ ಭರಿತ ಹಾಲಿಗೆ 1 ರೂ., ಟೋಕನ್ ಹಾಲಿಗೆ 2 ರೂ. ಹೆಚ್ಚಳ
ನವದೆಹಲಿ: ಇಂದಿನಿಂದ ದೆಹಲಿ ಮತ್ತು ವಿವಿಧೆಡೆ ಮಾರುಕಟ್ಟೆಗಳಲ್ಲಿ ಕೆನೆ ಭರಿತ ಹಾಲಿಗೆ 1 ರೂ. ಮತ್ತು ಟೋಕನ್ ಹಾಲಿಗೆ 2 ರೂ. ಹೆಚ್ಚಿಸಲು ಮದರ್ ಡೈರಿ ನಿರ್ಧರಿಸಿದೆ.
ಲೀಟರ್‌ಗೆ 63 ರೂಪಾಯಿ ಇದ್ದ ಕೆನೆ ಭರಿತ ಹಾಲಿನ ದರ ಈಗ 64 ರೂಪಾಯಿಗೆ ಏರಿಕೆಯಾಗಿದೆ.
ಆದರೂ 500 ಮಿಲಿ ಪ್ಯಾಕ್‍ಗಳಲ್ಲಿ ಮಾರಾಟವಾಗುವ ಕೆನೆ ಭರಿತ ಹಾಲಿನ ಬೆಲೆಯನ್ನು ಕಂಪನಿ ಪರಿಷ್ಕರಿಸಿಲ್ಲ. ಇನ್ನೂ ಟೋಕನ್ ಹಾಲು ಲೀಟರ್‌ಗೆ 50 ರೂ.ಯಂತೆ ಮಾರಾಟವಾಗಲಿದೆ.




